ಸೋಮವಾರ, ಜೂನ್ 14, 2021
22 °C

ಆಟೋ ಚಾಲಕರಿಗೆ ಆಹಾರ ಧಾನ್ಯದ ಕಿಟ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಕನೂರು: ‘ಲಾಕ್‌ಡೌನ್‌ ಕಾರಣ ಆಟೋ ಚಾಲಕರ ಬದುಕು ಸಂಕಷ್ಟದಲ್ಲಿದೆ. ಕುಟುಂಬ ನಿರ್ವಹಣೆ ಕಷ್ಟವಾಗಿದೆ’ ಎಂದು ಪುರಸಭೆ ಸದಸ್ಯ ಪವನ್ ಕುಮಾರ್ ಮೇಟಿ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಭಾನುವಾರ ಸಂಸದ ತೇಜಸ್ವಿ ಸೂರ್ಯ ಅಭಿಮಾನ ಬಳಗದ ವತಿಯಿಂದ ಆಟೋ ಚಾಲಕರಿಗೆ ಆಹಾರ ಧಾನ್ಯದ ಕಿಟ್ ವಿತರಿಸಿ ಮಾತನಾಡಿದರು.

ಕೋವಿಡ್ ನಿರ್ಮೂಲನೆಗಾಗಿ ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರು, ಪೌರ ಕಾರ್ಮಿಕರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಮಾಧ್ಯಮದವರು ಸೇರಿ ಇತರರು ತಮ್ಮ ಪ್ರಾಣ ಪಣಕ್ಕಿಟ್ಟು ಜನರನ್ನು ರಕ್ಷಿಸುತ್ತಿದ್ದಾರೆ. ಅವರ ಸೇವೆ ಅವಿಸ್ಮರಣೀಯವಾಗಿದೆ ಎಂದರು.

ಮಂಗಳೇಶ್ ಮಂಗಳೂರು, ಬಸವರಾಜ ಹಾಳಕೇರಿ, ಕೊಟ್ರಪ್ಪ ಮುತ್ತಾಳ, ಲಕ್ಷ್ಮಣ ಕಾಳಿ, ರಮೇಶ ಶಾಸ್ತ್ರಿ, ಕರಬಸಯ್ಯ ಬಿನ್ನಾಳ, ರುದ್ರಪ್ಪ ಭಂಡಾರಿ, ಬಸವರಾಜ, ಪ್ರಶಾಂತ್, ಪ್ರಮೋದ ಪುರ್ತಗೇರಿ ಹಾಗೂ ರಮೇಶ ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು