ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳೆ ವಿಮೆ: ರೈತರಿಗೆ ಮೋಸ ಖಂಡಿಸಿ ಪ್ರತಿಭಟನೆ

Published 19 ಮಾರ್ಚ್ 2024, 15:29 IST
Last Updated 19 ಮಾರ್ಚ್ 2024, 15:29 IST
ಅಕ್ಷರ ಗಾತ್ರ

ಜಾಲಹಳ್ಳಿ: ರೈತರಿಗೆ ಜಮೆ ಅಗುವಂತಹ ಬೆಳೆ ವಿಮೆ ಹಣದಲ್ಲಿ ಭಾರಿ ಭ್ರಷ್ಟಾಚಾರ ಮಾಡಲಾಗಿದೆ. ಇದನ್ನು ವಿರೋಸಿ ಪಟ್ಟಣದ ಉಪ ತಹಶೀಲ್ದಾರ್ ಕಚೇರಿ ಎದುರು ಮಾರ್ಚ್ 20 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂತ ರೈತ ಸಂಘದ ಮುಖಂಡ ಬಸವರಾಜ ನಾಯಕ ವಂದಲಿ ತಿಳಿಸಿದ್ದಾರೆ.

2021-21ನೇ ಸಾಲಿನಲ್ಲಿ ಜಾಲಹಳ್ಳಿ ಹಾಗೂ ಗಾಣಧಾಳ ಗ್ರಾಮಗಳ ಸುತ್ತ ಮುತ್ತಲ್ಲಿನ ಅನೇಕ ರೈತರು ಕಷ್ಟ ಕಾಲದಲ್ಲಿ ಬೆಳೆ ವಿಮೆ ಅನುಕೂಲವಾಗುತ್ತೆ ಎನ್ನುವ ಕಾರಣಕ್ಕೆ ಸಾವಿರಾರು ರೂಪಾಯಿ ವಿಮೆ ಕಂತು ಕಟ್ಟಿದರು ಅವರಿಗೆ ಯಾವುದೇ ವಿಮೆ ಹಣ ಬಂದಿಲ್ಲ. ಅದರೆ, 62 ರೈತರಿಗೆ ಮಾತ್ರ ₹1.21ಕೋಟಿ ಜಮೆ ಅಗಿದೆ. ಇದರಲ್ಲಿ ಕೆಲವರಿಗೆ ಜಮೀನು ಇದೆ. ಉಳಿದಂತೆ ಬಹುತೇಕರಿಗೆ ಮಧ್ಯವರ್ತಿ ಮೂಲಕ ವಿಮೆ ಹಣ ತಮ್ಮ ಖಾತೆಗೆ ಜಮೆ ಮಾಡಿಕೊಂಡಿದ್ದಾರೆ. ಈ ಅಕ್ರಮದಲ್ಲಿ ಕೃಷಿ ಇಲಾಖೆ, ಗ್ರಾ.ಪಂ, ಕಂದಾಯ ಇಲಾಖೆಯ ಅಧಿಕಾರಿಗಳು, ಭೀಮಾ ಫಸಲ್ ವಿಮಾ ಸಂಸ್ಥೆಯ ಅಧಿಕಾರಿಗಳು ಸಹ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT