ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಾಲಹಳ್ಳಿ | ವ್ಯಕ್ತಿ ಸಾವು: ವೀರಶೈವ ಸಮಾಜದ ಮುಖಂಡರಿಂದ ಪ್ರತಿಭಟನೆ

Published 15 ಮಾರ್ಚ್ 2024, 16:04 IST
Last Updated 15 ಮಾರ್ಚ್ 2024, 16:04 IST
ಅಕ್ಷರ ಗಾತ್ರ

ಜಾಲಹಳ್ಳಿ: ವ್ಯಕ್ತಿ ಕೊಲೆ ಸಂಬಂಧ ವೀರಶೈವ ಸಮಾಜದ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರಲ್ಲದೇ, ಆರೋಪಿಗಳ ಬಂಧನಕ್ಕೆ ಆಗ್ರಹಿಸಿದರು.

ಮುಂಡರಗಿ ಗ್ರಾಮದಲ್ಲಿ ಮಾ.11 ರಂದು ರಾತ್ರಿ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದ ಬಸವರಾಜ (35) ಎನ್ನುವವವರಿಗೆ ತೀವ್ರವಾಗಿ ಗಾಯವಾಗಿತ್ತು. ಅವರು ಶುಕ್ರವಾರ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದು ವೀರಶೈವ ಸಮಾಜದ ಆಕ್ರೋಶಕ್ಕೆ ಕಾರಣವಾಗಿತ್ತು. ಇಂದು ಸಮದಾಯದ ಮುಖಂಡರು ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು.

ಘಟನೆ ಏನು: ಮೃತ ವ್ಯಕ್ತಿಯ ಮಗ ಅರ್ಜುನನ ಕಿರಾಣ ಅಂಗಡಿಯಲ್ಲಿ ನರಸಪ್ಪ, ಸಣ್ಣ ವೆಂಕೋಬ ಎನ್ನುವವರು ಸಿಗರೇಟ್ ಹೇಳಿದ್ದಾರೆ. ಅವನು ಕೊಡದೇ ಇದ್ದಾಗ ಅವನಿಗೆ ಹೊಡೆದಿದ್ದಾರೆ. ಅವನು ಈ ವಿಷಯ ತಂದೆಗೆ ಹೇಳಿದ್ದಾನೆ. ನಂತರ ಇದೇ ವಿಷಯಕ್ಕೆ ಹೊಡೆದಾಟ ಉಂಟಾಗಿ ಬಸವರಾಜ ತಲೆಗೆ ಪೆಟ್ಟು ಬಿದ್ದು ಆಸ್ಪತ್ರೆ ಸೇರಿಸಲಾಗಿತ್ತು. ಮೃತನ ತಾಯಿ ಲಕ್ಷ್ಮಿ ನೀಡಿದ ದೂರಿನಲ್ಲಿ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ವಿಷಯ ತಿಳಿದು ಶುಕ್ರವಾರ ಸಂಜೆ 6 ಗಂಟೆಗೆ ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷ ಡಾ.ಕಿರಣ ಖೇಣದ್ ಅವರು ಜಾಲಹಳ್ಳಿ‌ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ನಮ್ಮ ಸಮಾಜದ ಜನರು ಯಾವುದೇ ತಂಟೆ, ತಕರಾರರು ಇಲ್ಲದೇ ಸೌಮ್ಯವಾಗಿ ಎಲ್ಲ ಸಮಾಜದ ಜನರ ಜೊತೆ ಒಳೆಯ ಸಂಭಂದವನ್ನು ಬೆಳೆಸಿಕೊಂಡು ಜೀವನ ನಡೆಸುತ್ತಾರೆ. ಆದರೆ, ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿ ಇಂತಹ ಮಾರಣಾಂತಿಕ ಹಲ್ಲೆ ಮಾಡಿರುವುದು ಪೊಲೀಸ್ ಇಲಾಖೆಯ ವೈಫಲ್ಯ ಎಂದು ದೂರಿದರು.

ತಕ್ಷಣವೇ ಅರೋಪಿಗಳನ್ನು ಬಂಧಿಸಬೇಕು. ಘಟನೆ ಜರುಗಿ ನಾಲ್ಕೂ ದಿನಗಳು ಕಳೆದರೂ ಇಲ್ಲಿವರೆಗೆ ಯಾರನ್ನೂ ಬಂಧಿಸಿಲ್ಲ ಎಂದು‌ ಆಕ್ರೋಶ ವ್ಯಕ್ತಪಡಿಸಿದರು.

ಈ ನಡುವೆ ಘಟನೆಗೆ ಸಂಬಂಧಿಸಿದಂತೆ ನರಸಪ್ಪ ಗುಜಪರ್ ಎಂಬುವವರನ್ನು ಶುಕ್ರವಾರ ಬಂಧಿಸಲಾಗಿದೆ ಎಂದು‌ ಪೋಲೀಸರು ತಿಳಿಸಿದ್ದಾರೆ.

ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲಿ ಪಿಎಸ್ಐ ಇರಲ್ಲಿಲ್ಲ. ಕೆಲಸದ ಕಾರಣಕ್ಕೆ ರಾಯಚೂರಿಗೆ ಹೋಗಿದ್ದಾರೆ ಎಂದು ಠಾಣೆ ಸಿಬ್ಬಂದಿ ತಿಳಿಸಿದ್ದಾರೆ.

ವೀರಶೈವ ಸಮಾಜದ ಮುಖಂಡರಾದ ಸಂಜೀವ ರಡ್ಡಿ, ಮಲ್ಲಣ್ಣ ವಕೀಲ, ಬಸವರಾಜ ಬಂಡೆಗುಡ್ಡ, ಸುರೇಶ ಅಮರಪುರ, ನಿರಂಜನ ಬಳೆ, ಬಸವರಾಜ ಪಾಣಿ, ಕೆ.ಎಸ್. ನಾಡಗೌಡ, ಬಸವರಾಜ ಎಚ್.ಪಿ. ಸೊಲಬಣ ಸೌದ್ರಿ, ಶರಣು ಹುಣಸಗಿ, ಬಸವರಾಜ ತೇಕೂರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT