ಸೋಮವಾರ, ಮಾರ್ಚ್ 27, 2023
29 °C

ನೀರಮಾನ್ವಿ: ಶಾಸಕರಿಂದ ಗೋವು ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಜಾವಾಣಿ ವಾರ್ತೆ

ನೀರಮಾನ್ವಿ(ಮಾನ್ವಿ): ತಾಲ್ಲೂಕಿನ ನೀರಮಾನ್ವಿ ಗ್ರಾಮದ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಶಾಸಕ ರಾಜಾ ವೆಂಕಟಪ್ಪ ನಾಯಕ ಗೋವು ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಪವಿತ್ರವಾದ ಗೋವಿನಲ್ಲಿ ಮುಕ್ಕೋಟಿ ದೇವತೆಗಳು ನೆಲೆಸಿರುವ ಬಗ್ಗೆ ನಂಬಿಕೆ ಇದೆ. ದೀಪಾವಳಿ ಸಂದರ್ಭದಲ್ಲಿ ಗೋವುಗಳನ್ನು ಪೂಜಿಸುವುದು ಮಹತ್ವದ ಧಾರ್ಮಿಕ ಕಾರ್ಯ. ಇದರೊಂದಿಗೆ ಗೋವುಗಳ ಸಂರಕ್ಷಣೆಯೂ ಅಗತ್ಯ’ ಎಂದು ಹೇಳಿದರು.

ದೇವಸ್ಥಾನದ ಸಮಿತಿ ವತಿಯಿಂದ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರನ್ನು ಸನ್ಮಾನಿಸಲಾಯಿತು.

ತಹಶೀಲ್ದಾರ್ ಅಬ್ದುಲ್ ವಾಹಿದ್, ಮುಖಂಡರಾದ ರಾಜಾ ರಾಮಚಂದ್ರ ನಾಯಕ, ಶ್ರೀನಿವಾಸ ನಾಯಕ, ಈರಣ್ಣ ಮರ್ಲಟ್ಟಿ, ಶರಣಪ್ಪಗೌಡ ಮದ್ಲಾಪುರ, ಹಂಪನಗೌಡ ನೀರಮಾನ್ವಿ, ಗೋಪಾಲನಾಯಕ ಹರವಿ , ಕಂದಾಯ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.