ಶನಿವಾರ, ಏಪ್ರಿಲ್ 1, 2023
30 °C

ಮಸ್ಕಿ: ಶಾಸಕರಿಂದ ಗೋವು ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಸ್ಕಿ: ದೀಪಾವಳಿಯ ಬಲಿಪಾಡ್ಯಮಿಯನ್ನು ಶುಕ್ರವಾರ ಪಟ್ಟಣದ ಭ್ರಮರಾಂಬಾ ದೇವಸ್ಥಾನದಲ್ಲಿ ಶಾಸಕ ಆರ್. ಬಸನಗೌಡ ತುರ್ವಿಹಾಳ ಅವರು ಗೋವಿಗೆ ಪೂಜೆ ಸಲ್ಲಿಸುವ ಮೂಲಕ ಆಚರಿಸಿದರು.

ಬೆಳಿಗ್ಗೆ ದೇವಸ್ಥಾನಕ್ಕೆ ಆಗಮಿಸಿದ ಶಾಸಕರು, ಭ್ರಮರಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಗೋವಿಗೆ ವಿಭೂತಿ, ಕುಂಕಮ ಹಚ್ಚಿ ಪೂಜೆ ಸಲ್ಲಿಸಿದರು.

ದೀಪಾವಳಿಯು ಸರ್ವರ ಬಾಳಿನಲ್ಲಿ ಬೆಳಕು ತರಲಿ ಎಂದು ಇದೇ ಶುಭ ಹಾರೈಸಿದರು. ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಣ್ಣ ನಾಯಕ ಸೇರಿದಂತೆ ಮುಖಂಡರು ಹಾಗೂ ದೇವಸ್ಥಾನ ಸಮಿತಿ ಅರ್ಚಕರು ಇದ್ದರು.

ಉದ್ಬಾಳದಲ್ಲಿ ಗೋವು ಪೂಜೆ : ತಾಲ್ಲೂಕಿನ ಉದ್ಬಾಳ ಗ್ರಾಮದಲ್ಲಿ ಮುಜುರಾಯಿ ಇಲಾಖೆಗೆ ಸೇರಿದ ದೇವಸ್ಥಾನದಲ್ಲಿ ಗೋ ಪೂಜೆ ನಡೆಸಲಾಯಿತು. ಬಳಗಾನೂರು ಪಟ್ಟಣದ ಮಾರುತಿ ದೇವಸ್ಥಾನದಲ್ಲಿ ಗೋವು ಪೂಜಾ ಕಾರ್ಯಕ್ರಮ ನಡೆಯಿತು. ತಹಶೀಲ್ದಾರ್ (ಗ್ರೇಡ್-2) ಪ್ರಭಾಕರ್ ಭಟ್, ದೇವಸ್ಥಾನ ಸಮಿತಿ ಅರ್ಚಕ ರಂಗನಾಥ ಪೂಜಾರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು