ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶ್ವರಪ್ಪಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ: ಕೆ.ಬಸವಂತಪ್ಪ ಒತ್ತಾಯ

Last Updated 31 ಜುಲೈ 2021, 8:16 IST
ಅಕ್ಷರ ಗಾತ್ರ

ರಾಯಚೂರು: ಹಿಂದುಳಿದ ವರ್ಗದ ಕುರುಬ ಸಮಾಜದ ಕೆ.ಎಸ್.ಈಶ್ವರಪ್ಪ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಬಸವಂತಪ್ಪ ಒತ್ತಾಯಿಸಿದರು.

‘ಬಿಜೆಪಿ ಸಂಘಟಿಸಿ ತಳ ಮಟ್ಟದಲ್ಲಿ ಗುರುತಿಸಿಕೊಂಡು ಬೆಳೆದ ಈಶ್ವರಪ್ಪ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಶ್ರಮಿಸಿದ್ದಾರೆ. ಬಿಜೆಪಿ ಮುಖಂಡ ಕುರುಬ ಸಮಾಜದ ನಾಯಕ ಕೆ.ವಿರೂಪಾಕ್ಷಪ್ಪನವರು ಪಕ್ಷಕ್ಕಾಗಿ ಅನೇಕ ಕೆಲಸಮಾಡಿದ್ದನ್ನು ಪರಿಗಣಿಸಿ ನಿಗಮ ಮಂಡಳಿ ಸ್ಥಾನ ನೀಡಬೇಕು’ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಮಾಜದ ಕಾರ್ಯಾಧ್ಯಕ್ಷ ಬಿ.ಬಸವರಾಜ, ಪ್ರಧಾನ ಕಾರ್ಯದರ್ಶಿ ಕೆ.ವೇಣುಗೋಪಾಲ, ಕೆ.ಪಂಪಾಪತಿ, ಶೇಖರ, ಕೆ.ಗುರುಪ್ರತಾಪ, ಸಂಗಮೇಶ ಭಂಡಾರಿ ಇದ್ದರು.

ಶಿವನಗೌಡ ನಾಯಕರಿಗೆ ಸಚಿವ ಸ್ಥಾನ ನೀಡಿ: ರಾಯಚೂರು ‘ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಅವರಿಗೆ ಸಚಿವ ಸ್ಥಾನ ನೀಡಬೇಕು’ ಎಂದು ದೇವದುರ್ಗ ತಾಲ್ಲೂಕು ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಬಸವರಾಜ ಅಕ್ಕರಕಿ ಒತ್ತಾಯಿಸಿದರು.

‘ಶಿವನಗೌಡ ನಾಯಕ ಪ್ರಭಾವಿಯಾಗಿದ್ದು, ತಮ್ಮ ಕ್ಷೇತ್ರದ ಅಭಿವೃದ್ದಿಗೆ ಕೆಲಸ ಮಾಡಿದ್ದಾರೆ. ಕಳೆದ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಸಚಿವರಾಗಿ ಕೆಲಸ ಮಾಡಿದ್ದಾರೆ’ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಲಿಂಗಪ್ಪ ಗೌಡೂರು, ಶಾಂತಕುಮಾರ ಹೊನ್ನಟಗಿ, ಮಾರೆಪ್ಪ ಮಂದಕಲ್, ಮಲ್ಲಯ್ಯ ಖಾನಾಪೂರ, ಈರಪ್ಪ ಮದರಕಲ್ ಇದ್ದರು.

ಬಂಜಾರ ಸಮಾಜ ಒತ್ತಾಯ

ಸಿರವಾರ: ಬಂಜಾರ ಸಮಾಜ ಮುಖಂಡ ಶಾಸಕ ಪ್ರಭು ಚವಾಣ್ ಮತ್ತು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಬಿಜೆಪಿ ಮುಖಂಡ ಹಾಗೂ ಬಂಜಾರ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಶೇಖರಪ್ಪ ರಾಠೋಡ್ ಒತ್ತಾಯಿಸಿದ್ದಾರೆ.

‘ಬಿ.ಎಸ್.ಯಡಿಯೂರಪ್ಪ ಅವರ ಸಂಪುಟದಲ್ಲಿ ಪಶು ಸಂಗೋಪನಾ ಸಚಿವರಾಗಿ ಕೆಲಸ ಮಾಡಿರುವ ಪ್ರಭು ಚವಾಣ್ ಅವರು ಎರಡು ವರ್ಷಗಳಲ್ಲಿ ತಮ್ಮ ಕ್ಷೇತ್ರದ ಜೊತೆಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ’ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಂಜಾರ ಸಮಾಜದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಕೇಮಣ್ಣ ರಾಠೋಡ್ ಇದ್ದರು.

ಸಚಿವ ಸ್ಥಾನ ನೀಡಲು ಒತ್ತಾಯ

ದೇವದುರ್ಗ: ಶಾಸಕ ಕೆ.ಶಿವನಗೌಡ ನಾಯಕ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕರ್ನಾಟಕ ವಾಲ್ಮೀಕಿ ಮಹಾಸಭಾದ ಮುಖಂಡರು ಆಗ್ರಹಿಸಿದ್ದಾರೆ.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ವಾಲ್ಮೀಕಿ ಮಹಾಸಭಾದ ಮುಖಂಡ ಕೆ. ವಿನೋದ ನಾಯಕ ಅವರು, ‘ಕಲ್ಯಾಣ ಕರ್ನಾಟಕದ ಪರಿಶಿಷ್ಟ ಪಂಗಡ ಸಮುದಾಯದ ಪ್ರಭಾವಿ ರಾಜಕಾರಣಿಯಾದ ಕೆ.ಶಿವನಗೌಡ ನಾಯಕ ಅವರು, 4 ಬಾರಿ ವಿಧಾನಭೆಯ ಸದಸ್ಯರಾಗಿ, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಯಾಗಿ, ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ‘ ಎಂದರು.

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ತಾಲ್ಲೂಕಾಧ್ಯಕ್ಷ ಪಾಶ ಇಡಪನೂರು ಮಾತನಾಡಿದರು. ಕರ್ನಾಟಕ ವಾಲ್ಮೀಕಿ ಮಹಾಸಭಾದ ತಾಲ್ಲೂಕ ಅಧ್ಯಕ್ಷ ಯಮನೂರಪ್ಪ, ಪುರಸಭೆ ಸದಸ್ಯರಾದ ಭೀಮಣ್ಣ ಗೋಸಲ್, ಭೀಮಣ್ಣಗೌಡ ಮೇಟಿ, ರಂಗಪ್ಪ, ನಾಗಪ್ಪ, ಸಿದ್ದಪ್ಪ ರಾಮನಾಳ, ತಿರುಪತಿ, ಶಿವು ಮಜ್ಜಿಗೆ, ರೆಡ್ಡೆಪ್ಪ, ಸಾಬಣ್ಣ, ಹಾಗೂ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಪದಾಧಿಕಾರಿಗಳು ಇದ್ದರು.

ಶಿವನಗೌಡರಿಗೆ ಸಚಿವ ಸ್ಥಾನ ನೀಡಲು ಆಗ್ರಹ

ಕವಿತಾಳ: ‘ರಾಯಚೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಅವರಿಗೆ ಸಚಿವ ಸ್ಥಾನ ನೀಡಬೇಕು’ ಎಂದು ಬಿಜೆಪಿ ಮುಖಂಡ ಎಚ್‍.ಬಸವರಾಜ ಆಗ್ರಹಿಸಿದರು.

ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕೆ.ಶಿವನಗೌಡ ನಾಯಕ ಅವರು ನಾಲ್ಕನೇ ಬಾರಿ ಶಾಸಕರಾಗಿದ್ದಾರೆ. ರಾಯಚೂರಿಗೆ ವಿಮಾನ ನಿಲ್ದಾಣ, ಐಐಐಟಿ ಕಾಲೇಜು ಸೇರಿದಂತೆ ವಿವಿಧ ಯೋಜನೆಗಳ ಮಂಜೂರಾತಿಯಲ್ಲಿ ಶ್ರಮಿಸಿದ್ದಾರೆ. ಜಿಲ್ಲೆಯಲ್ಲಿ ಪ್ರಭಾವಿ ನಾಯಕರಾಗಿದ್ದು, ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡಬೇಕು’ ಎಂದರು.

ಬಿಜೆಪಿ ಮುಖಂಡರಾದ ಯಮನಪ್ಪ ದಿನ್ನಿ, ಗಫೂರ್‍ ಪಾಶಾ, ಬಂದೇನವಾಜ್‍, ಯಲ್ಲಪ್ಪ ಕೊಡ್ಲಿ, ಮೆಹಬೂಬ್‍ ಅರಿಕೇರಿ. ತಾಯಪ್ಪ ಛಲವಾದಿ ಮತ್ತು ನೀಲಕಂಠ ಮತ್ತಿತರರು ಇದ್ದರು.

‘ಶಿವರಾಜ ಪಾಟೀಲಗೆ ಸಚಿವ ಸ್ಥಾನ ನೀಡಿ’

ರಾಯಚೂರು: ನೂತನ ಸಚಿವ ಸಂಪುಟದಲ್ಲಿ ರಾಯಚೂರು ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ರಾಯಚೂರು ನಗರ ಕಲಾವಿದರ ಸಮಿತಿಯ ಪದಾಧಿಕಾರಿಗಳು ಈಚೆಗೆ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಹಿಂದಿನಿಂದ ಜಿಲ್ಲೆಗೆ ಸಚಿವ ಸ್ಥಾನ ನೀಡಲು ಎಲ್ಲಾ ರಾಜಕೀಯ ಪಕ್ಷಗಳು ಹಿಂದೇಟು ಹಾಕುತ್ತಾ ಬಂದಿವೆ ಎಂದರು.

ಡಾ.ಶಿವರಾಜ ಪಾಟೀಲರು ತಮ್ಮ ಆಡಳಿತ ಅವಧಿಯಲ್ಲಿ ಸಮಾಜಮುಖಿ ಹಾಗೂ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಜಿಲ್ಲೆಯ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲು ಸಚಿವ ಸ್ಥಾನ ಅವಶ್ಯವಾಗಿದೆ ಎಂದು ಒತ್ತಾಯಿಸಿದರು.

ಕಲಾವಿದರ ಸಂಘದ ಅಧ್ಯಕ್ಷ ವೆಂಕಟೇಶ ಆಲ್ಕೋಡ್, ವಿಜಯಕುಮಾರ ದಿನ್ನಿ, ಡಿಂಗ್ರಿ ನರೇಶ, ಗೋವಿಂದರೆಡ್ಡಿ ಸರ್ಜಾಪುರ, ಸುಧಾಕರ, ಅಯ್ಯಪ್ಪಸ್ವಾಮಿ ಪಿಕಳಿಹಾಳ, ತಿರುಪತಿ, ಈರಣ್ಣ ಹೂಗಾರ, ಗುರುರಾಜ ಕುಲಕರ್ಣಿ, ಅಶ್ವಿನಿಕುಮಾರ, ರಾಘವೇಂದ್ರ ಇದ್ದರು.

ಶಿವನಗೌಡರಿಗೆ ಸಚಿವ ಸ್ಥಾನಕ್ಕೆ ಆಗ್ರಹ

ಕವಿತಾಳ: ‘ರಾಯಚೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಅವರಿಗೆ ಸಚಿವ ಸ್ಥಾನ ನೀಡಬೇಕು’ ಎಂದು ಬಿಜೆಪಿ ಮುಖಂಡ ಎಚ್‍.ಬಸವರಾಜ ಆಗ್ರಹಿಸಿದರು.

ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕೆ.ಶಿವನಗೌಡ ನಾಯಕ ಅವರು ನಾಲ್ಕನೇ ಬಾರಿ ಶಾಸಕರಾಗಿದ್ದಾರೆ. ರಾಯಚೂರಿಗೆ ವಿಮಾನ ನಿಲ್ದಾಣ, ಐಐಐಟಿ ಕಾಲೇಜು ಸೇರಿದಂತೆ ವಿವಿಧ ಯೋಜನೆಗಳ ಮಂಜೂರಾತಿಯಲ್ಲಿ ಶ್ರಮಿಸಿದ್ದಾರೆ. ಜಿಲ್ಲೆಯಲ್ಲಿ ಪ್ರಭಾವಿ ನಾಯಕರಾಗಿದ್ದು, ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡಬೇಕು’ ಎಂದು ಒತ್ತಾಯಿಸಿದರು.

ಬಿಜೆಪಿ ಮುಖಂಡರಾದ ಯಮನಪ್ಪ ದಿನ್ನಿ, ಗಫೂರ್‍ ಪಾಶಾ, ಬಂದೇನವಾಜ್‍, ಯಲ್ಲಪ್ಪ ಕೊಡ್ಲಿ, ಮೆಹಬೂಬ್‍ ಅರಿಕೇರಿ. ತಾಯಪ್ಪ ಛಲವಾದಿ ಮತ್ತು ನೀಲಕಂಠ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT