ಮಂಗಳವಾರ, ಸೆಪ್ಟೆಂಬರ್ 28, 2021
21 °C

ಮಂತ್ರಾಲಯ: ಮೃತ್ತಿಕಾ ಸಂಗ್ರಹಣಾ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಆಷಾಢ ಶುದ್ಧ ಪೂರ್ಣಿಮೆ ದಿನವಾದ ಶನಿವಾರ ಮಂತ್ರಾಲಯದಲ್ಲಿ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಮೃತ್ತಿಕಾ ಸಂಗ್ರಹಣಾ ವಿಧಿ–ವಿಧಾನಗಳನ್ನು ನೆರವೇರಿಸಿದರು.

ತುಂಗಭದ್ರಾ ನದಿ ಪಕ್ಕದಲ್ಲಿರುವ ತುಳಸಿ ವನದಲ್ಲಿ ವಿಶೇಷ ಪೂಜೆ ನೆರವೇರಿಸಿದ ಶ್ರೀಗಳು, ತುಳಸಿಗಿಡದ ಕೆಳಗಿನ ಮೃತ್ತಿಕೆಯನ್ನು ಬೆಳ್ಳಿ ಪಾತ್ರೆಯಲ್ಲಿ ಸಂಗ್ರಹಿಸುವ ಕಾರ್ಯ ನೆರವೇರಿಸಿದರು.

ತುಳಸಿ ವನದಿಂದ ಮಠದವರೆಗೂ ಸುವರ್ಣ ಪಲ್ಲಕ್ಕಿಯಲ್ಲಿ ಮೃತ್ತಿಕೆಯನ್ನು ಮೆರವಣಿಗೆ ಮೂಲಕ ತರಲಾಯಿತು. ‌ಬಳಿಕ ಧಾರ್ಮಿಕ‌ ನಿಯಮಾನುಸಾರ ಮೃತ್ತಿಕೆಯನ್ನು ರಾಯರ ಮೂಲ ವೃಂದಾವನದ ಮೇಲೆ ಇರಿಸಲಾಯಿತು.

ಮಠದ ಸಿಬ್ಬಂದಿ ಹಾಗೂ ಭಕ್ತರು ಮೆರವಣಿಗೆಯಲ್ಲಿ ‌ಭಾಗಿಯಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.