ಶನಿವಾರ, ಜುಲೈ 31, 2021
26 °C
ಹದಗೆಟ್ಟಿರುವ ಇಡಪನೂರು ಸರ್ಕಾರಿ ಪ್ರಾಥಮಿಕ ಶಾಲೆ ಪರಿಸರ

ರಾಯಚೂರಿನ ಇಡಪನೂರು ಶಾಲಾ ಕಟ್ಟಡ ಆವರಿಸಿದ ಕೊಳಚೆ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ತಾಲ್ಲೂಕಿನ ಇಡಪನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡಕ್ಕೆ ಚರಂಡಿಗಳಿಂದ ಹರಿದು ಬರುವ ಕೊಳಚೆ ಆವರಿಸಿದ್ದು, ಶಾಲಾ ಪರಿಸರವನ್ನು ಹದಗೆಡಿಸಿದೆ.

ಕೊಳಚೆಯಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಸಾಂಕ್ರಾಮಿಕ ರೋಗ ಹರಡಲು ಅನುವಾಗಿದೆ. ಅದರಿಂದ ಶಾಲಾ ಕೋಣೆಗಳಿಗೆ ದುರ್ನಾತ ಹರಡಿಕೊಂಡಿದೆ. ಕೊಳಚೆಯಲ್ಲಿ ಬಿಡುಬಿಟ್ಟಿರುವ ಹಂದಿಗಳು ಮತ್ತು ಬೀದಿ ನಾಯಿಗಳಿಂದ ಶಿಕ್ಷಕರು, ವಿದ್ಯಾರ್ಥಿಗಳು ರೋಸಿ ಹೋಗಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಕೊಳಚೆ ಆವರಿಸಿದ್ದರಿಂದ ಶಾಲಾ ಕಟ್ಟಡವು ಶಿಥಿಲವಾಗುವ ಹಂತಕ್ಕೆ ತಲುಪಿದೆ.

ಶಾಲಾ ಕಟ್ಟಡ ಹಿಂಭಾಗದಲ್ಲಿ ಬಡವರಿಗಾಗಿ ಆಶ್ರಯ ಮನೆಗಳನ್ನು ನಿರ್ಮಿಸಲಾಗಿದ್ದು, ಜನವಸತಿಗಳಿಂದ ನಿತ್ಯ ಕೊಳಚೆ ಹರಿದು ಬರುತ್ತಿದೆ. ಕೊಳಚೆ ಹರಿದು ಹೋಗುವುದಕ್ಕೆ ಯೋಗ್ಯ ಚರಂಡಿಗಳನ್ನು ನಿರ್ಮಾಣ ಮಾಡದಿರುವುದು ಸಮಸ್ಯೆ ಸೃಷ್ಟಿಗೆ ಕಾರಣ. ಶಾಲೆಗೆ ಹೊಂದಿಕೊಂಡಿರುವ ಭೀಮಾ ಕಾಲೋನಿಯ ಜನರು ಕೂಡಾ ಸಂಕಷ್ಟ ಅನುಭವಿಸುತ್ತಿದ್ದು, ಎಲ್ಲರೂ ಬಡವರಿದ್ದಾರೆ. ಸಮಸ್ಯೆ ಪರಿಹಾರ ಮಾಡುವಂತೆ ಅಧಿಕಾರಿಗಳಿಗೆ ಮತ್ತು ರಾಜಕಾರಣಿಗಳಿಗೆ ಮನವಿ ಮಾಡುತ್ತಾ ಬರುತ್ತಿದ್ದಾರೆ.

ಬಡ ಶಾಲಾ ಮಕ್ಕಳು ಮತ್ತು ಬಡವರು ಎದುರಿಸುತ್ತಿರುವ ಸಮಸ್ಯೆಗೆ ಇದುವರೆಗೂ ಸ್ಪಂದನೆ ಇಲ್ಲದಾಗಿದೆ. ಹಲವು ವರ್ಷಗಳಿಂದ ಜನರು ಕೊಳಚೆ ನೀರಿನಲ್ಲಿಯೇ ಸಂಚರಿಸುವಂತಾಗಿದೆ. ಅಂಗನವಾಡಿ ಶಾಲಾ ಕಟ್ಟಡವೊಂದು ಈಗಾಗಲೇ ಕುಸಿದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು