ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಟ್ಟಿ ಪಟ್ಟಣದಲ್ಲಿ ನಕಲಿ ನೋಟುಗಳ ಹಾವಳಿ: ಆತಂಕ

Published 31 ಮಾರ್ಚ್ 2024, 14:07 IST
Last Updated 31 ಮಾರ್ಚ್ 2024, 14:07 IST
ಅಕ್ಷರ ಗಾತ್ರ

ಹಟ್ಟಿಚಿನ್ನದಗಣಿ: ಹಟ್ಟಿ ಪಟ್ಟಣದಲ್ಲಿ ನಕಲಿ ನೋಟುಗಳು ಬಡ ಜನರ ಹೊಟ್ಟೆಯ ಮೇಲೆ ಹೋಡೆಯುತ್ತಿವೆ. ದಿನಕ್ಕೆ ದುಡಿಯುವುದೇ ₹200 ರಿಂದ ₹300. ಅದರಲ್ಲಿ ಒಂದು ಖೋಟಾನೋಟು ಬಂದರೆ ಮಾಡುವುದಾದರೂ ಏನು ಎನ್ನುವುದು ಹಟ್ಟಿ ಪಟ್ಟಣದ ವ್ಯಾಪಾರಸ್ಧರ ಅಳಲಾಗಿದೆ.

ಹಟ್ಟಿ ಪಟ್ಟಣದಲ್ಲಿ ನಕಲಿ ನೋಟುಗಳ ಹಾವಳಿ ಮಿತಿಮೀರಿ ಹೋಗಿದೆ. ಪಟ್ಟಣದ ಜನದಟ್ಟನೆ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡು ಖೋಟಾ ನೋಟುಗಳನ್ನು ಅಕ್ರಮವಾಗಿ ಚಲಾಚಣೆ ಮಾಡುತ್ತಿದ್ದಾರೆ ಎನ್ನುತ್ತಾರೆ ಸಾರ್ವಜನಿಕರು.

ತರಕಾರಿ, ವ್ಯಾಪಾರಸ್ಧರು ಮತ್ತು ಪಿಗ್ಮಿ ಕಲೆಕ್ಷನ್ ಮಾಡುವ ಹುಡುಗರ ಹತ್ತಿರ ನೋಟುಗಳು ಪತ್ತೆಯಾಗಿದ್ದು, ಈ ಕೋಟಾ ನೋಟು ಪತ್ತೆಯಾಗಿರುವುದರ ಬಗ್ಗೆ ಇಲ್ಲಿನ ವ್ಯಾಪಾರಸ್ಧರು ಮಾಹಿತಿ ಹಂಚಿಕೊಂಡಿದ್ದಾರೆ.

ಹಟ್ಟಿ ಪಟ್ಟಣದಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಸಾರ್ವಜನಿಕರು ಸಣ್ಣ, ಪುಟ್ಟ ವ್ಯಾಪಾರಸ್ಧರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ದುಡಿಯುವ ₹100-₹200 ರೂಪಾಯಿಗಳಲ್ಲಿ ಇಂತಹ ಖೋಟಾ ನೋಟುಗಳು ಬಂದರೆ ಸಾಕಷ್ಟು ಸಮಸ್ಯೆಯಾಗುತ್ತದೆ ಎಂದು ಸ್ಧಳೀಯ ವ್ಯಾಪಾರಸ್ಧರು ತಮ್ಮ ಅಳಲು ತೊರಿಕೊಂಡಿದ್ದಾರೆ.

ನಕಲಿ ನೋಟುಗಳನ್ನು ಅಕ್ರಮವಾಗಿ ಚಲಾವಣೆ ಮಾಡುವವರ ವಿರುದ್ಧ ಪೊಲೀಸ್ ಇಲಾಖೆ ನಿಗಾ ಇರಿಸಲಿದೆ. ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಹಕರಿಸಬೇಕು

-ಹೋಸಕೆರಪ್ಪ ಹಟ್ಟಿ ಪೊಲೀಸ್ ಠಾಣೆ ಪಿಐ

ಹಟ್ಟಿ ಪಟ್ಟಣದಲ್ಲಿ ನಕಲಿ ನೋಟು ಹರಿದಾಡುತ್ತಿದ್ದು, ಜನರು ಎಚ್ಚರಿಕೆಯಿಂದ ವ್ಯೆವಹಾರ ಮಾಡಬೇಕಿದೆ.

-ವಿನೋದ ಎಸ್ಬಿಐ ಹಟ್ಟಿ ಶಾಖೆಯ ವ್ಯವಸ್ಧಾಪಕ

ನಕಲಿ ನೋಟುಗಳ ಹಾವಳಿ ಹೆಚ್ಚಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ

-ರಮೇಶ ಉಳಿಮೇಶ್ವರ ಸ್ಧಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT