ಬುಧವಾರ, ಜುಲೈ 6, 2022
22 °C

ತಂತ್ರಾಂಶದಿಂದ ನೈಜ ಕೂಲಿಕಾರರಿಗೆ ಅನುಕೂಲ: ರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಸ್ಕಿ: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (ನರೇಗಾ) ಕೂಲಿ ಕಾರ್ಮಿಕರ ಹಾಜರಾತಿಗೆ ಕೇಂದ್ರ ಸರ್ಕಾರ ಜಾರಿಗೊಳಿಸಿದ ಎನ್ಎಂಎಂಎಸ್ ತಂತ್ರಾಂಶದಿಂದ ನೈಜ ಕೂಲಿಕಾರರಿಗೆ ಅನುಕೂಲವಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ (ನರೇಗಾ) ಶಿವಾನಂದರೆಡ್ಡಿ ಹೇಳಿದರು.

ತಾಲೂಕಿನ ಕನ್ನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವ್ಯಾಸನಂದಿಹಾಳ, ಮಾರಲದಿನ್ನಿ ಜಲಾಶಯ, ಅಡವಿಭಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಗ್ಗನಾಯಕನಭಾವಿ, ಬೆಲ್ಲದಮರಡಿ ಮುಂತಾದ ಗ್ರಾಮಗಳಲ್ಲಿ ಬುಧವಾರ ನರೇಗಾ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು.

ಮೇಟಿಗಳು ಕಡ್ಡಾಯವಾಗಿ ತಂತ್ರಾಂಶದಲ್ಲಿ ಕೂಲಿಕಾರರ ಹಾಜರಾತಿ ದಾಖಲಿಸಬೇಕು. ಕಾಮಗಾರಿ ಸ್ಥಳ ಗ್ರಾಮದಿಂದ 5 ಕಿ.ಮೀ. ದೂರ ಇದ್ದರೆ, ಪ್ರಯಾಣ ವೆಚ್ಚ ಭರಿಸಲಾಗುವುದು. ಬಿಸಿಲಿನ ಝಳ ಹೆಚ್ಚುತ್ತಿರುವುದರಿಂದ ನೆರಳು, ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.

ಕೂಲಿ ಮೊತ್ತ ಸಂಪೂರ್ಣ ಪಾವತಿಯಾಗಬೇಕಾದರೆ, ತಾಂತ್ರಿಕ ಸಹಾಯಕರು ನಿಗದಿಪಡಿಸಿದ ಅಳತೆ ಪ್ರಕಾರ ಕೆಲಸ ಪೂರ್ಣಗೊಳಿಸಬೇಕು. ಇಲ್ಲವಾದರೆ, ಕೂಲಿ ಮೊತ್ತ ಕಡಿಮೆಯಾಗುತ್ತದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಜಾರಿಗೊಳಿಸಿದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಅತ್ಯಂತ ಕಡಿಮೆ ಮೊತ್ತದ ಪಾಲಿಸಿಗಳಾಗಿದ್ದು, ಕಾರ್ಮಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ತಾಂತ್ರಿಕ ಸಹಾಯಕ ಸೋಮಶೇಖರ್, ವೀರಮ್ಮ, ಶಿವಪುತ್ರಪ್ಪ, ದುರಗೇಶ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು