ಲಿಂಗಸುಗೂರು: ತಹಶೀಲ್ದಾರ್ ಅವರ ಖೊಟ್ಟಿ ಸಹಿ ಮಾಡಿ ವಿವಿಧ ಪ್ರಮಾಣಪತ್ರ ಮಾರಾಟ ಮಾಡಿದ ಇಬ್ಬರ ವಿರುದ್ಧ ಗುರುವಾರ ರಾತ್ರಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾಲಿಂಗರಾಜ ಮೇದಿನಾಪುರ ಹಾಗೂ ಕಂಪ್ಯೂಟರ್ ಆಪರೇಟರ್ ಶರಣು ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.

ಮಹಾಲಿಂಗರಾಜ ಮೇದಿನಾಪುರ ಅವರು ತಮ್ಮ ಜಮೀನಿನ ಮೇಲೆ ಬ್ಯಾಂಕ್ನಿಂದ ಸಾಲ ಪಡೆಯುವ ಉದ್ದೇಶದಿಂದ ಬೇಬಾಕಿ ಪ್ರಮಾಣ ಪತ್ರ, ಭೂ ಹಿಡುವಳಿ ಪ್ರಮಾಣ ಪತ್ರ ಹಾಗೂ ಗೇಣಿ ರಹಿತ ಪ್ರಮಾಣ ಪತ್ರಕ್ಕಾಗಿ ಹೆಚ್ಚಿನ ಹಣ ಪಡೆದುಕೊಂಡು ಶರಣು ಕಂಪ್ಯೂಟರ್ಸ್ ಆಪರೇಟರ್ ಖೊಟ್ಟಿ ದಾಖಲೆ ಸೃಷ್ಟಿಸಿ ಅದಕ್ಕೆ ತಹಶೀಲ್ದಾರ್ ಅವರ ನಕಲಿ ಸಹಿ ಮಾಡಿ, ಸೀಲು ಹಾಕಿ ಪ್ರಮಾಣ ಪತ್ರ ನೀಡಿ ಸರ್ಕಾರಕ್ಕೆ ವಂಚಿಸಿದ್ದಾರೆ ಎಂದು ಗ್ರೇಡ್-2 ತಹಶೀಲ್ದಾರ್ ಬಸವರಾಜ ಝಳಕಿಮಠ ನೀಡಿದ ದೂರಿನ್ವಯ ಪಿಎಸ್ಐ ರಾಘವೇಂದ್ರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಕುರಿತು ‘ನಕಲಿ ಪ್ರಮಾಣಪತ್ರ ಹಾವಳಿ’ ಶೀರ್ಷಿಕೆಯಡಿ ಪ್ರಜಾವಾಣಿ ಅ.10ರ ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.