ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ವಿಹಾಳ: ಉಪಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸಲು ಮನವಿ

Published 9 ಆಗಸ್ಟ್ 2023, 13:51 IST
Last Updated 9 ಆಗಸ್ಟ್ 2023, 13:51 IST
ಅಕ್ಷರ ಗಾತ್ರ

ತುರ್ವಿಹಾಳ: ಪಟ್ಟಣ ವ್ಯಾಪ್ತಿಯ ತುಂಗಭದ್ರಾ ಎಡದಂಡೆ ಕಾಲುವೆಯ 40 ಮತ್ತು 42ರ ಉಪಕಾಲುವೆ ಮೂಲಕ ಸಮರ್ಪಕವಾಗಿ ಹೊಲಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ಶ್ರೀನಿವಾಸ ಕ್ಯಾಂಪ್ ಹಾಗೂ ಗುಂಜಳ್ಳಿ ಕ್ಯಾಂಪ್, ಮಾಟುರು ಗ್ರಾಮದ ರೈತರು ನೀರಾವರಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿ ಎಎಇ ಹನುಮಂತಪ್ಪ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

42ರ ಉಪಕಾಲುವೆಯ ಮೇಲ್ಭಾಗದ ರೈತರು ದೊಡ್ಡ ಪೈಪ್‌ಗಳನ್ನು ಉಪಯೋಗಿಸಿ ಅತಿ ಹೆಚ್ಚು ನೀರು ಬಳಕೆ ಮಾಡುತ್ತಿರುವುದರಿಂದ ಕೆಳ ಭಾಗದ ರೈತರ ಜಮೀನಿಗೆ ನೀರು ಸಿಗುತ್ತಿಲ್ಲ. ಭತ್ತ ಬೆಳೆಯಲು ಭಾರಿ ಸಂಕಷ್ಟ ಎದುರಿಸುವಂತಾಗಿದೆ. ಈ ಕಾಲುವೆ ವ್ಯಾಪ್ತಿಗೆ ಅಧಿಕೃತವಾಗಿ 1400 ಎಕರೆ ಜಮೀನು ಒಳಪಡುತ್ತದೆ. ಆದರೆ ಅಕ್ರಮವಾಗಿ 400 ಎಕರೆ ಜಮೀನಿಗೆ ದೊಡ್ಡ ಪೈಪ್‌ಗಳಿಂದ ನೀರು ಬಳಸಲಾಗುತ್ತಿದೆ. ಅಕ್ರಮ ನೀರಾವರಿ ತಡೆಯಬೇಕು ಎಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕ್ರಮ ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಕೆಳಭಾಗದ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಧರಣಿ ನಡೆಸಲಾಗುವುದು ಎಂದು ಬಸವರಾಜ ಡಣಾಪುರ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಬಾಪುಗೌಡ ದೇವರಮನಿ, ಶಿವರಾಜ ಉಪ್ಪಳ, ಬಸವರಾಜ, ದೊಡ್ಡಪ್ಪ, ಹುಸೇನಪ್ಪ, ಬೂಜ್ಜಪ್ಪ, ಮಲ್ಲಯ್ಯ, ಹುಲುಗಪ್ಪ, ನಿರುಪಾದಿ, ಬಸವರಾಜ, ಗುರಪ್ಪ, ಚಿದಾನಂದ, ನಿರುಪಾದೆಪ್ಪ ಹಾಗೂ ಸಣ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT