ಶನಿವಾರ, ಆಗಸ್ಟ್ 13, 2022
24 °C

ರಾಯಚೂರು: ವೈಟಿಪಿಎಸ್ ಶಾಖೋತ್ಪನ್ನ 2ನೇ ಘಟಕದಲ್ಲಿ ಬೆಂಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ತಾಲ್ಲೂಕಿನ ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಸ್ಥಾವರ (ವೈಟಪಿಎಸ್)ದ ಎರಡನೇ ಘಟಕದ ವಿದ್ಯುತ್ ಟ್ರಾನ್ಸ್ ಪಾರ್ಮರ್‌ ಗುರುವಾರ ತಡರಾತ್ರಿ ಬೆಂಕಿ ಹೊತ್ತಿ ಉರಿದಿದೆ.

ಒಂದು ಕೋಟಿ ಮೊತ್ತದ ಉಪಕರಣಗಳು ಸುಟ್ಟುಹೋಗಿವೆ. ಆರ್‌ಟಿಪಿಎಸ್, ವೈಟಿಪಿಎಸ್ ಬೆಂಕಿ ನಂದಿಸುವ ವಿಭಾಗದವರು ಹಾಗೂ ರಾಯಚೂರು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.

'800 ಮೆಗಾವಾಟ್ ವಿದ್ಯುತ್ ಘಟಕದ ಉತ್ಪಾದನೆ ಆರಂಭಕ್ಕೆ ಸಿಂಕ್ರೇಷನ್ ಮಾಡುತ್ತಿರುವಾಗ ಬೆಂಕಿ ಅವಘಡ ಸಂಭವಿಸಿದೆ' ಎಂದು ವೈಟಿಪಿಎಸ್ ಯೋಜನಾ ಪ್ರದೇಶದ ಮುಖ್ಯಸ್ಥ ಶಶಿಕಾಂತ  ತಿಳಿಸಿದರು.

ಶಾಖೋತ್ಪನ್ನ ವಿದ್ಯುತ್ ಘಟಕಗಳಲ್ಲಿ ಬೆಂಕಿ ಅವಘಡಗಳು ಸಾಮಾನ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು