ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಅಪಮಾನಿಸುವ ವ್ಯಕ್ತಿ ಪ್ರಜೆಗಳನ್ನು ಹೇಗೆ ರಕ್ಷಿಸುತ್ತಾನೆ?: ಶಿವನಗೌಡ

ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಕಿಡಿ
Published 12 ಮಾರ್ಚ್ 2024, 15:34 IST
Last Updated 12 ಮಾರ್ಚ್ 2024, 15:34 IST
ಅಕ್ಷರ ಗಾತ್ರ

ದೇವದುರ್ಗ: ಸಂವಿಧಾನಾತ್ಮಕವಾಗಿ ಚುನಾಯಿತರಾದವರಿಗೆ ಸಂವಿಧಾನಕ್ಕೆ ಗೌರವ ಕೊಡುವುದನ್ನು ಕಲಿಯಲಿ. ಸಂವಿಧಾನವನ್ನು ಅಪಮಾನಿಸುವ ವ್ಯಕ್ತಿ ಪ್ರಜೆಗಳನ್ನು ಹೇಗೆ ರಕ್ಷಿಸುತ್ತಾನೆ’ ಎಂದು ಮಾಜಿ ಶಾಸಕ ಕೆ.ಶಿವನಗೌಡ ನಾಯಕ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಕಿಡಿ ಕಾರಿದರು.

ಸಂವಿಧಾನದಿಂದ ಜಾತ್ಯತೀತ ಪದ ತೆಗೆಯಬೇಕು ಎಂದು ಹೇಳುವಷ್ಟು ಬುದ್ಧಿವಂತ ಹೆಗಡೆ ಅಲ್ಲ. ಸಂವಿಧಾನದಲ್ಲಿ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ಬಾಬಾ ಸಾಹೇಬರು 75 ವರ್ಷಗಳ ಹಿಂದೆಯೇ ದಾಖಲಿಸಿ, ಭಾರತದಲ್ಲಿನ ಪ್ರತಿಯೊಂದು ಜೀವಿಗಳಿಗೂ ನ್ಯಾಯ ಒದಗಿಸಿದ್ದಾರೆ. ಎಲುಬಿಲ್ಲದ ನಾಲಿಗೆ ಎಂದು ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಅವರ ಹೇಳಿಕೆಯಿಂದ ಭಾರತದ 140 ಕೋಟಿ ಜನರ ಭಾವನೆ ಕೆರಳಿಸಿದೆ ಎಂದು ಕಿಡಿಕಾರಿದ್ದಾರೆ.

’ಆತ ಕೂಡಲೇ ಜನರ ಕ್ಷಮೆ ಕೇಳಬೇಕು. ಇಂತಹ ವಿವಾದಾತ್ಮಕ ಅಸಂಬದ್ಧ ಹೇಳಿಕೆಯಿಂದ ಬಿಜೆಪಿ ನಾಯಕರೆಲ್ಲ ಮುಜುಗರಕ್ಕೆ ಈಡಾಗುತ್ತಿದ್ದೇವೆ. ವರಿಷ್ಠರು ಅವಿವೇಕಿತನದ ಹೇಳಿಕೆಗಳನ್ನು ನೀಡದಂತೆ ಶಿಸ್ತು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT