ಶುಕ್ರವಾರ, ಏಪ್ರಿಲ್ 10, 2020
19 °C

ಇಫಾದಿಂದ ರೋಗಿ ಸಂಬಂಧಿಗಳಿಗೆ ಉಚಿತ ಊಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ನಗರದ ರಿಮ್ಸ್‌ ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳ ಸಂಬಂಧಿಗಳಿಗೆ ಉಚಿತವಾಗಿ ಆಹಾರ ಒದಗಿಸುವ ವಾಹನವನ್ನು ಇಫಾ ಫೌಂಡೇಷನ್‌ನಿಂದ ಆರಂಭಿಸಲಾಗಿದ್ದು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರು ಶನಿವಾರ ಚಾಲನೆ ನೀಡಿದರು.

ಆಸ್ಪತ್ರೆಯ ಆವರಣದಲ್ಲಿದ್ದ ರೋಗಿಗಳ ಸಂಬಂಧಿಗಳಿಗೆ ಊಟ ನೀಡುವ ಮೂಲಕ ಯೋಜನೆ ಆರಂಭಿಸಲಾಯಿತು. ಈ ಕುರಿತು ಮಾತನಾಡಿದ ಅವರು, ‘ಒಂದು ತುತ್ತು ಅನ್ನ ಸಿಗದೆ ಅದೆಷ್ಟೋ ಜನ ಉಪವಾಸದಿಂದ ಬದುಕುತ್ತಾರೆ. ಈ ಭೂಮಿ ಮೇಲೆ ಜನಸಿದ ನಾವೆಲ್ಲರೂ ಹಂಚಿಕೊಂಡು ತಿನ್ನಬೇಕೆ ವಿನಃ ಯಾರು ಉಪವಾಸ ಇರುವ ಸ್ಥಿತಿ ಇರಬಾರದು. ಆ ನಿಟ್ಟಿನಲ್ಲಿ ಇಫಾ (ಇಎಫ್‌ಎ) ಫೌಂಡೇಶನ್ ಮಾಡುವ ಈ ಕಾರ್ಯ ಶ್ಲಾಘನೀಯವಾದದು’ ಎಂದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು