ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುದಗಲ್: 6 ಕೊಠಡಿಗಳಲ್ಲಿ 60 ವಿದ್ಯಾರ್ಥಿಗಳು

ಮುದಗಲ್: ಬಾಡಿಕೆ ಕಟ್ಟಡದಲ್ಲಿ ವಸತಿ ನಿಲಯ
Published : 11 ಸೆಪ್ಟೆಂಬರ್ 2024, 5:14 IST
Last Updated : 11 ಸೆಪ್ಟೆಂಬರ್ 2024, 5:14 IST
ಫಾಲೋ ಮಾಡಿ
Comments

ಮುದಗಲ್: ಪಟ್ಟಣದ ಎಪಿಎಂಸಿ ಮುಂಭಾಗದಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗದ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಕಟ್ಟಡ ಕಾಮಗಾರಿ ಮಂದಗತಿಯಲ್ಲಿ ನಡೆದಿರುವುದರಿಂದ ವಿದ್ಯಾರ್ಥಿನಿಯರು ವಿವಿಧ ಸೌಲಭ್ಯಕ್ಕಾಗಿ ಪರದಾಡುವಂತಾಗಿದೆ.

2020ರ ಕೆಕೆಆರ್‌ಡಿಬಿ ಯೋಜನೆಯಡಿಯಲ್ಲಿ ₹2 ಕೋಟಿ ಅನುದಾನದಲ್ಲಿ ಕಟ್ಟಡ ಕಾಮಗಾರಿ ನಡೆದಿದೆ. ಆರಂಭದಲ್ಲಿ ಕಳಕಪ್ಪ ಜೀಡಿ ಎಂಬುವರು ಕಟ್ಟಡ ಕಾಮಗಾರಿ ನಿಲ್ಲಿಸಬೇಕು ಎಂದು ನ್ಯಾಯಾಲಯದಿಂದ ತಡೆ ತಂದು 3 ತಿಂಗಳ ಕಾಮಗಾರಿ ನಿಲ್ಲಿಸಿದ್ದರು.

ಹೊಸ ಕಟ್ಟಡದಲ್ಲಿ 16 ಕೊಠಡಿಗಳು, ಒಂದು ಊಟದ ಹಾಲ್, ಒಂದು ಅಡುಗೆ ತಯಾರಿಸುವ ಕೊಠಡಿ ಇದೆ. ನಾಲ್ಕು ವರ್ಷಗಳಿಂದ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಕೊಠಡಿಗಳಿಗೆ ಕಿಟಕಿ ಮುಚ್ಚುವ ಸಾಮಾಗ್ರಿಗಳು ಅಳವಡಿಸಿಲ್ಲ. ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಸುಣ್ಣ ಬಣ್ಣ ಕಂಡಿಲ್ಲ.

ಬಾಲಕಿಯರ ವಸತಿ ನಿಲಯ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಬಾಡಿಗೆ ಕಟ್ಟಡದಲ್ಲಿ ಆರು ಕೊಠಡಿಗಳಲ್ಲಿ 50 ವಿದ್ಯಾರ್ಥಿಗಳು ಇರಬೇಕಾಗಿದೆ. ಈ ವಿದ್ಯಾರ್ಥಿನಿಯರಿಗೆ ಐದು ಸ್ನಾನ ಗೃಹ, ನಾಲ್ಕು ಶೌಚಾಲಯಗಳಿವೆ. ಇವರು ಸಮಯಕ್ಕೆ ಸರಿಯಾಗಿ ಶಾಲೆಗೆ ಹೋಗಬೇಕಾದ ಶೌಚ, ಸ್ನಾನಕ್ಕೆ ನಸುಕಿನ ಜಾವ ಐದು ಗಂಟೆಯಿಂದಲೇ ಪಾಳೆ ಹಚ್ಚಬೇಕಾಗಿದೆ.

ಆರು ಕೊಠಡಿಯಲ್ಲಿ ಸರ್ಕಾರದಿಂದ ನೇಮಕವಾದ ಐವತ್ತು ವಿದ್ಯಾರ್ಥಿನಿಯರು, ವಿವಿಧ ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳ ಶಫಾರಸಿನ ಮೂಲಕ ಅನಧಿಕೃತವಾಗಿ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವಸತಿ ನಿಲಯದಲ್ಲಿದ್ದು ಕೊಠಡಿಗಳು ಸಾಲುತ್ತಿಲ್ಲ ಎಂದು ವಸತಿ ನಿಲಯದ ವಾರ್ಡನ್ ಹೇಳುತ್ತಿದ್ದರೆ.

ಬಾಡಿಗೆ ಕಟ್ಟಡ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವುದರಿಂದ ವಾಹನಗಳ ಶಬ್ದದಿಂದ ಓದಿಲು ಆಗುತ್ತಿಲ್ಲ. ಓದಲು ಗುಣಮಟ್ಟದ ಪರಿಸರ ಇಲ್ಲ.

ನೂತನ ಕಟ್ಟಡ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಿ ಉದ್ಘಾಟನೆ ಮಾಡಿ ಕೊಡಿ ಎಂದು ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ ಅವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿನಿಯರು ದೂರಿದರು.

ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಂದಗತಿಯಲ್ಲಿ ನಡೆಯುತ್ತಿದ್ದ ಕಾಮಗಾರಿಯನ್ನು ಶೀಘ್ರವೇ ಮುಗಿಸುವಂತೆ ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚಿಸಿ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕೆಂದು ಡಿಎಸ್‌ಎಸ್ ಮುಖಂಡ ಶರಣಪ್ಪ ಕಟ್ಟಿಮನಿ, ಬಸವರಾಜ ಬಂಕದಮನಿ ಒತ್ತಾಯಿಸಿದ್ದಾರೆ.

ವಸತಿ ನಿಲಯ ಕಟ್ಟಡ ಕಾಮಗಾರಿ ಶೀಘ್ರವೇ ಮುಗಿಸಿ ಕೊಡಿ ಎಂದು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿದ್ದೇವೆ
ರಮೇಶ ರಾಠೋಡ್, ತಾಲ್ಲೂಕಾಧಿಕಾರಿ, ಹಿಂದುಳಿದ ವರ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT