ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೌರ ಕಾರ್ಮಿಕರ ಸಮಸ್ಯೆಗಳಿಗೆ ಸರ್ಕಾರ ಸ್ಪಂದನೆ: ಶಾಸಕ ಬಸನಗೌಡ ತುರುವಿಹಾಳ

Published : 23 ಸೆಪ್ಟೆಂಬರ್ 2024, 14:32 IST
Last Updated : 23 ಸೆಪ್ಟೆಂಬರ್ 2024, 14:32 IST
ಫಾಲೋ ಮಾಡಿ
Comments

ಮಸ್ಕಿ: ಪೌರ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿದೆ ಎಂದು ಶಾಸಕ ಹಾಗೂ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್. ಬಸನಗೌಡ ತುರುವಿಹಾಳ ಹೇಳಿದರು.

ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಸೋಮವಾರ ಪೌರ ಕಾರ್ಮಿಕ ದಿನಾಚರಣೆ ಹಾಗೂ ಹಿರಿಯ ಪೌರ ಕಾರ್ಮಿಕರಿಗೆ ನಡೆದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರ 7ನೇ ವೇತನ ಆಯೋಗ ಜಾರಿಗೆ ತರುವ ಮೂಲಕ ನೌಕರರ ಬೆನ್ನಿಗೆ ಇದೆ ಎಂದರು.

ಮಸ್ಕಿ ಅಶೋಕ ಶಿಲಾ ಶಾಸನ ಸ್ಥಳದ ಅಭಿವೃದ್ಧಿಗೆ ಸಚಿವ ಸಂಪುಟ ₹ 10 ಕೋಟಿ ಯೋಜನೆಗೆ ಒಪ್ಪಿಗೆನೀಡಿದೆ ಎಂದರು. ಪಟ್ಟಣದ ಅಭಿವೃದ್ಧಿ ಪುರಸಭೆ ಆಡಳಿತ ಮಂಡಳಿ ಕೈ ಜೋಡಿಸಬೇಕು. ಪಕ್ಷಾತೀತವಾಗಿ ಎಲ್ಲರೂ ಸೇರಿ ಸುಂದರ ನಗರ ಮಾಡೋಣ ಎಂದು ಕರೆ ನೀಡಿದರು.

ತಹಶೀಲ್ದಾರ್ ಮಲ್ಲಪ್ಪ ಯರಗೋಳ. ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಉಪಾಧ್ಯಕ್ಷ ಗೀತಾ ಶಿವರಾಜ, ಸಿಪಿಐ ಬಾಲಚಂದ್ರ ಲಕ್ಕಂ, ಪ್ರಕಾಶ ದಾರಿವಾಲ, ಸಾಹಿತಿ ಸಿ. ದಾನಪ್ಪ ನಿಲೋಗಲ್, ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ, ರಾಜ್ಯ ಪೌರ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಣ್ಣ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪಂಪಾಪತಿ ಹೂಗಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ ಇತರರು ಇದ್ದರು. ಹಿರಿಯ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಗಾಂಧಿ ನಗರದಿಂದ ಭ್ರಮರಾಂಬ ದೇವಸ್ಥಾನದವರೆಗೆ ಪೌರ ಕಾರ್ಮಿಕರ ಮೆರವಣಿಗೆ ನಡೆಯಿತು

ಪಟ್ಟಣದ ಅಭಿವೃದ್ಧಿಗೆ ಶ್ರಮಿಸಿ: ಮೂರು ವರ್ಷದಿಂದ ಅಧಿಕಾರ ವಂಚಿತ ಸದಸ್ಯರಿಗೆ ಇದೀಗ ಅಧಿಕಾರ ಸಿಕ್ಕಿದೆ. ನೂತನ ಆಡಳಿತ ಮಂಡಳಿ ಶಾಸಕರೊಂದಿಗೆ ಸೇರಿ ಪಟ್ಟಣದ ಅಭಿವೃದ್ಧಿ ಶ್ರಮಿಸಿಬೇಕು ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಕರೆ ನೀಡಿದರು.

’ಪೌರ ಕಾರ್ಮಿಕರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಬೇಕು. ದಿನ 24 ಗಂಟೆ ಕೆಲಸ ಮಾಡಿ ಪಟ್ಟಣದ ಸ್ಚಚ್ಚತೆಗೆ ಗಮನ ಕೊಡುತ್ತಿರುವ ಪೌರ ಕಾರ್ಮಿಕರ ಆರೋಗ್ಯದ ಬಗ್ಗೆಯೂ ಸರ್ಕಾರ ಮುಂಜಾಗೃತ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT