ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಸುಗೂರು: ತಾಲ್ಲೂಕಿನಾದ್ಯಂತ ಅದ್ಧೂರಿ ಗಣೇಶ ಚತುರ್ಥಿ

Published 19 ಸೆಪ್ಟೆಂಬರ್ 2023, 14:22 IST
Last Updated 19 ಸೆಪ್ಟೆಂಬರ್ 2023, 14:22 IST
ಅಕ್ಷರ ಗಾತ್ರ

ಲಿಂಗಸುಗೂರು: ಪಟ್ಟಣದ ವಿವಿಧ ಬಡಾವಣೆಗಳು ಸೇರಿದಂತೆ ತಾಲ್ಲೂಕಿನಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ, ನೈವೇದ್ಯ ಸಲ್ಲಿಸಿ ಗಣೇಶ ಚತುರ್ಥಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಮಂಗಳವಾರ ಪಟ್ಟಣದ ಗಡಿಯಾರ ವೃತ್ತದಲ್ಲಿ ಹಿಂದೂ ಮಹಾಸಭಾ ಗಜಾನನ ಸಮಿತಿ, ಪ್ರವಾಸಿ ಮಂದಿರ ಬಳಿ ಕೊಕ್ಕೊ ಬಾಯ್ಸ್‌, ಬಸ್‍ ನಿಲ್ದಾಣ ಬಳಿ ಸ್ವಾಮಿ ವಿವೇಕಾನಂದ ಗಜಾನನ ಸಮಿತಿ, ರಾಯಚೂರು ರಸ್ತೆಯಲ್ಲಿ ಲಕ್ಷ್ಮಿ ಗಜಾನನ ಸಮಿತಿ, ಸಂತೆ ಬಜಾರದಲ್ಲಿ ಹಿಂದೂ ಜಾಗರಣಾ ಸಮಿತಿ ಬೃಹದಾಕಾರದ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗಿದೆ. ಠಾಣೆ ವ್ಯಾಪ್ತಿ ಪ್ರದೇಶದಲ್ಲಿ 122ಕ್ಕೂ ಹೆಚ್ಚು ಹಾಗೂ ಸ್ಥಳೀಯ ಪುರಸಭೆ ವ್ಯಾಪ್ತಿಯಲ್ಲಿ 28 ಗಣೇಶಮೂರ್ತಿ ಪ್ರತಿಷ್ಠಾಪನೆಗೊಂಡಿವೆ.

ಎರಡು ದಿನಗಳಿಂದ ಗಲ್ಲಿಗಲ್ಲಿಗೆ ಗಣೇಶ ಮೂರ್ತಿಗಳನ್ನು ಮೆರವಣಿಗೆ ಮೂಲಕ ಕರೆದೊಯ್ದ ಯುವಕರು ಮಂಗಳವಾರ ಬೆಳಗಿನ ಜಾವ ವಿಶೇಷ ಟೆಂಟ್‍ಗಳಲ್ಲಿ ಪ್ರತಿಷ್ಠಾಪಿಸಿ, ಪೂಜಾ ಕೈಂಕರ್ಯ ನೆರವೇರಿಸಿದರು. ಆಯಾ ಪ್ರದೇಶಗಳ ಜನತೆ ನೈವೇದ್ಯ ಸಮೇತ ಆಗಮಿಸಿ ಕಾಯಿ ಕರ್ಪೂರ ಅರ್ಪಿಸಿ ಭಕ್ತಿ ಭಾವ ಮೆರೆದರು. ಕೆಲ ಸಮಿತಿಯವರು ನಿತ್ಯ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ಪ್ರಸಾದ ವ್ಯವಸ್ಥೆಯ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿದ್ದು ಕಂಡುಬಂತು.

ವಿವಿಧ ಪಕ್ಷಗಳ ಮುಖಂಡರು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಂಘ– ಸಂಸ್ಥೆಗಳ ಪ್ರತಿನಿಧಿಗಳು ಪೂಜಾ ಕಾರ್ಯದಲ್ಲಿ ಭಾಗವಹಿಸಿ ದರ್ಶನ ಪಡೆದುಕೊಂಡರು.

ಲಿಂಗಸುಗೂರು ಬಸ್ ನಿಲ್ದಾಣ ಬಳಿ ಬಡಾವಣೆಯಲ್ಲಿ ಸ್ವಾಮಿ ವಿವೇಕಾನಂದ ಗಜಾನನ ಸಮಿತಿ ಮಂಗಳವಾರ ಪ್ರತಿಷ್ಠಾಪಿಸಿದ ಗಣೇಶಮೂರ್ತಿ
ಲಿಂಗಸುಗೂರು ಬಸ್ ನಿಲ್ದಾಣ ಬಳಿ ಬಡಾವಣೆಯಲ್ಲಿ ಸ್ವಾಮಿ ವಿವೇಕಾನಂದ ಗಜಾನನ ಸಮಿತಿ ಮಂಗಳವಾರ ಪ್ರತಿಷ್ಠಾಪಿಸಿದ ಗಣೇಶಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT