ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಗಳ ಎಣಿಕೆಗೆ ಒಂದೇ ದಿನ ಬಾಕಿ

ರಾಯಚೂರು ಜಿಲ್ಲೆಯ 173 ಗ್ರಾಪಂಗಳ ಮತದಾನ ಮುಕ್ತಾಯ
Last Updated 28 ಡಿಸೆಂಬರ್ 2020, 15:15 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ಏಳು ತಾಲ್ಲೂಕುಗಳ 173 ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮತಪೆಟ್ಟಿಗೆಗಳನ್ನು ಬಂದೋಬಸ್ತ್‌ನಲ್ಲಿ ಇರಿಸಲಾಗಿದೆ. ಡಿಸೆಂಬರ್‌ 30 ರಂದು ಮತಗಳ ಎಣಿಕೆ ಪ್ರಕ್ರಿಯೆ ನಡೆಯಲಿದೆ.

ರಾಯಚೂರು ತಾಲ್ಲೂಕಿನ 34 ಗ್ರಾಮ ಪಂಚಾಯಿತಿಗಳ ಮತಗಳ ಎಣಿಕೆ ರಾಯಚೂರು ನಗರದ ಎಲ್‌ವಿಡಿ ಕಾಲೇಜಿನಲ್ಲಿ, ಲಿಂಗಸುಗೂರು ತಾಲ್ಲೂಕಿನ 29 ಗ್ರಾಮ ಪಂಚಾಯಿತಿಗಳ ಮತಗಳ ಎಣಿಕೆ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ, ಮಸ್ಕಿ ತಾಲ್ಲೂಕಿನ 17 ಗ್ರಾಮ ಪಂಚಾಯಿತಿಗಳ ಮತಗಳ ಎಣಿಕೆಯು ಮುದಗಲ್‌ ಪಟ್ಟಣದ ಸರ್ಕಾರಿ ದೇವನಾಂ ಪದವಿ ಕಾಲೇಜಿನಲ್ಲಿ, ಮಾನ್ವಿ ಮತ್ತು ಸಿರವಾರ ತಾಲ್ಲೂಕುಗಳ 31 ಗ್ರಾಮ ಪಂಚಾಯಿತಿಗಳ ಮತ ಎಣಿಕೆಯು ಮಾನ್ವಿಯ ಬಾಷುಮಿಯಾ ಸಾಹುಕಾರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ, ದೇವದುರ್ಗ ತಾಲ್ಲೂಕಿನ 28 ಗ್ರಾಮ ಪಂಚಾಯಿತಿಗಳ ಮತ ಎಣಿಕೆಯು ಡಾನ್‌ಬಾಸ್ಕೊ ಶಾಲೆಯಲ್ಲಿ, ಸಿಂಧನೂರು ತಾಲ್ಲೂಕಿನ 30 ಗ್ರಾಮ ಪಂಚಾಯಿತಿಗಳ ಮತ ಎಣಿಕೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆಸುವುದಕ್ಕೆ ಈಗಾಗಲೇ ಪೂರ್ವ ಸಿದ್ಧತೆಯನ್ನು ಆಯಾ ತಾಲ್ಲೂಕು ಆಡಳಿತಗಳು ಮಾಡಿಕೊಂಡಿವೆ.

ರಾಯಚೂರಿನ ತಾಲ್ಲೂಕಿನ 34 ಗ್ರಾಮ ಪಂಚಾಯಿತಿಗಳ ಮತಗಳ ಎಣಿಕೆಗಾಗಿ ನಗರದ ಎಲ್‌ವಿಡಿ ಕಾಲೇಜಿನಲ್ಲಿ ಪ್ರತ್ಯೇಕವಾಗಿ ಕೊಠಡಿಗಳನ್ನು ಸಿದ್ಧಗೊಳಿಸಲಾಗಿದೆ.

ಕೊಠಡಿ ಸಂಖ್ಯೆ 5 ರಲ್ಲಿ ಶಾಖವಾದಿ, ‍ಪಲ್ಕಂದೊಡ್ಡಿ, ಕಾಡ್ಲೂರು, ಸಗಮಕುಂಟಾ, ಯರಗುಂಟಾ, ಕೊರ್ತಕುಂದಾ, ಇಬ್ರಾಹಿಂದೊಡ್ಡಿ, ಮಾಮಡದೊಡ್ಡಿ, ಕೊರ್ವಿಹಾಳ, ಕೊಠಡಿ ಸಂಖ್ಯೆ 6 ರಲ್ಲಿ ಯಾಪಲದಿನ್ನಿ, ಬೂರ್ದಿಪಾಡ, ರಾಳದೊಡ್ಡಿ, ನಾಗನದೊಡ್ಡಿ, ಅಪ್ಪನದೊಡ್ಡಿ, ಗಾಜರಾಳ, ವಡ್ಡೆಪಲ್ಲಿ, ಚಂದ್ರಬಂಡಾ, ಕಟ್ಲಟಕೂರ, ಪಲವಲದೊಡ್ಡಿ, ಗಣಮೂರು, ಅರಸಿಗೇರಾ, ಕೊಠಡಿ ಸಂಖ್ಯೆ 7 ರಲ್ಲಿ ಬಾಯಿದೊಡ್ಡಿ, ವಾಡವಾಟಿ, ಆಗಪೂರ(ಡಿ), ಕುರುಬದೊಡ್ಡಿ, ಕಡಗಂದೊಡ್ಡಿ, ಸಿಂಗನೋಡಿ, ವಡ್ಲಂದೊಡ್ಡಿ, ಬಾಪೂರು, ಮಂಡಲಗೇರಾ, ಕೊಠಡಿ ಸಂಖ್ಯೆ 9 ರಲ್ಲಿ ಕಮಲಾಪೂರ, ಅನವಾರ, ಮಂಜರ್ಲಾ, ಗೊನವಾರ, ಗಧಾರ, ಲಿಂಗನಖಾನದೊಡ್ಡಿ, ಮಾಸದೊಡ್ಡಿ, ಜುಲುಂಗೇರಾ, ಕೊಠಡಿ ಸಂಖ್ಯೆ 10 ರಲ್ಲಿ ಜಂಬಲದಿನ್ನಿ, ಪುಚ್ಚಲದಿನ್ನಿ, ಕೊತ್ತದೊಡ್ಡಿ, ಮಿಡಗಲದಿನ್ನಿ, ವೈ.ಮೈಲಾಪೂರ, ಇಡಪನೂರು, ಕೊಠಡಿ ಸಂಖ್ಯೆ 11 ರಲ್ಲಿ ತಲಮಾರಿ,ಗಾಣಧಾಳ, ಚಿಕ್ಕಮಂಚಾಲಿ, ಕೊಠಡಿ ಸಂಖ್ಯೆ 101 ರಲ್ಲಿ ಗುಂಜಹಳ್ಳಿ, ಯರಗೇರಾ, ಗೋಡಿಹಾಳ, ಗಿಲ್ಲೇಸುಗೂರು, ತುಂಗಭದ್ರಾ, ತುಂಗಭದ್ರಾ ಕ್ಯಾಂಪ್‌, ದುಗನೂರು, ಬಿಚ್ಚಾಲಿ, ಯದ್ಲಾಪೂರ, ಗಟ್ಟು ಬಿಚ್ಚಾಲಿ, ಬಿಚ್ಚಾಲಿ ಕ್ಯಾಂಪ್‌, ಚನ್ನವೀರನಗರ, ಪುರತಿಪ್ಲಿ, ತುರುಕನಡೋಣಾ, ಅಲ್ಕೂರು.

ಕೊಠಡಿ ಸಂಖ್ಯೆ 102 ರಲ್ಲಿ ಮಟಮಾರಿ, ಚಿಕ್ಕಸುಗೂರು, ಕುಕನೂರು, ಏಗನೂರು, ಮರ್ಚಟಹಾಳ, ದಿನ್ನಿ, ಪೆಸಲದಿನ್ನಿ, ಗಾರಲದಿನ್ನಿ, ಕೊಠಡಿ ಸಂಖ್ಯೆ 103 ರಲ್ಲಿ ಮಮದಾಪೂರು, ನೆಲಹಾಳ, ಆಶಾಪೂರ, ಕೊಠಡಿ ಸಂಖ್ಯೆ 103 ರಲ್ಲಿ ಅರಳಿಬೆಂಚಿ, ಕಲ್ಮಲಾ, ಹುಣಸಿಹಾಳಹುಡಾ, ಕೊಠಿಡಿ ಸಂಖ್ಯೆ 104 ರಲ್ಲಿ ಜಾಗೀರ ವೆಂಕಟಾಪೂರ, ಮುರಾನಪೂರ, ಅರಳಪ್ಪನಹುಡಾ, ಸುಲ್ತಾನಪುರ, ಫತ್ತೇಪೂರ, ರಘುನಾಥಹಳ್ಳಿ, ಹಾಳವೆಂಕಟಾಪೂರ, ಗೋನಾಳ, ಮನ್ಸಲಾಪೂರ, ಮರ್ಚೆಡ್‌, ಹೊಸಪೇಟೆ, ಮರ್ಚೆಡ್‌, ಕೊಠಡಿ ಸಂಖ್ಯೆ 106 ರಲ್ಲಿ ಜೇಗರಕಲ್‌, ಜೆ.ತಿಮ್ಮಾಪೂರ, ಶ್ರೀನಿವಾಸಪೂರ, ಜೆ.ಹನುಮಾಪೂರ, ಹೆಂಟೆರಾಳ, ಮೀರಾಪೂರ, ಜೆ.ಮಲ್ಲಾಪೂರ, ಕಾಡ್ಲೂರು, ಗುರ್ಜಾಪೂರ, ಅರಷಣಗಿ, ರಂಗಾಪೂರ, ಹಾಳತಿಮ್ಮಾಪೂರ, ಬೇವಿನಬೆಂಚಿ, ಕರೆಕಲ್‌, ಕೊಠಡಿ ಸಂಖ್ಯೆ 107 ರಲ್ಲಿ ದೇವಸೂಗೂರು, ಶಕ್ತಿನಗರ, ಕೊಠಡಿ ಸಂಖ್ಯೆ 203 ರಲ್ಲಿ ಮಿಟ್ಟಿ ಮಲ್ಕಾಪೂರ, ಮಲಿಯಾಬಾದ್‌, ದೇವನಪಲ್ಲಿ, ಬಿಜನಗೇರಾ, ಉಂಡ್ರಾಳದೊಡ್ಡಿ, ಐಜಾಪೂರ, ಹರಕನದೊಡ್ಡಿ, ಸಿದ್ರಾಂಪೂರ, ಬೋಳಮಾನದೊಡ್ಡಿ, ರಾಜಲಬಂಡಾ, ಕೊಠಡಿ ಸಂಖ್ಯೆ 204 ರಲ್ಲಿ ಯದ್ಲಾಪೂರ, ಹೆಗ್ಗಸನಹಳ್ಳಿ, ವಡ್ಲೂರು, ಗಂಜಳ್ಳಿ, ಹೀರಾಪೂರ, ಬಿ.ಹನುಮಾಪೂರ, ಹೀರಾಪೂರ, ಮೂಡಲದಿನ್ನಿ, ಎನ್‌.ಹನುಮಾಪೂರ, ಕೊಠಡಿ ಸಂಖ್ಯೆ 205 ರಲ್ಲಿ ಉಡಮಗಲ್‌, ನಾಗಲಾಪೂರ, ಖಾನಾಪೂರ, ನದಿಗಡ್ಡಿ ಮಲ್ಕಾಪೂರ, ಬುಡದಿನ್ನಿ, ಗಂಗವಾರ, ಗುಂಡ್ರವೇಲಿ.

ಎಲ್ಲ ಕೊಠಡಿಗಳಲ್ಲಿ ಮತಗಳ ಎಣಿಕೆಗಾಗಿ ಟೇಬಲ್‌ಗಳನ್ನು ಸಿದ್ಧಪಡಿಸಲಾಗಿದೆ. ಪೊಲೀಸರು ಎಲ್ಲ ಕಡೆಗಳಲ್ಲು ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದಾರೆ. ಮತ ಎಣಿಕೆ ನಡೆಯುವ ಕೋಣೆಗಳಲ್ಲಿ ಹಾಗೂ ಹೊರಗಡೆ ಅಗತ್ಯ ಸೂಚನೆಗಳನ್ನು ಅಂಟಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT