ಶನಿವಾರ, ಏಪ್ರಿಲ್ 17, 2021
30 °C

ಗುರು ರಾಘವೇಂದ್ರ ಪತ್ತಿನ ಸೌಹಾರ್ದ ಸಹಕಾರಿ ಸಂಸ್ಥೆಗೆ ₹ 56 ಲಕ್ಷ ನಿವ್ವಳ ಲಾಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾನ್ವಿ: ‘ಪಟ್ಟಣದ ಗುರು ರಾಘವೇಂದ್ರ ಪತ್ತಿನ ಸೌಹಾರ್ದ ಸಹಕಾರಿ ಸಂಸ್ಥೆ 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ ₹ 56 ಲಕ್ಷ ನಿವ್ವಳ ಲಾಭ ಗಳಿಸಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಡಾ.ವೀರಣ್ಣ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ ಸಹಕಾರಿ ಸಂಸ್ಥೆ 2020-21ನೇ ಸಾಲಿನಲ್ಲಿ ₹ 53.66 ಕೋಟಿ ವ್ಯವಹಾರ ಮಾಡಿ, ₹ 21.97 ಕೋಟಿ ಸಾಲ ನೀಡಿದೆ. ₹ 65ಲಕ್ಷ ಷೇರು ಬಂಡವಾಳ, ₹ 31.69 ಕೋಟಿ ಠೇವಣಿ, ₹ 33.65 ಕೋಟಿ ದುಡಿಯುವ ಬಂಡವಾಳ ಹೊಂದಿದೆ’ ಎಂದು ತಿಳಿಸಿದರು.

‘ಕೋವಿಡ್ ವಾರಿಯರ್ಸ್‍ಗಳಾಗಿ ಸೇವೆ ಸಲ್ಲಿಸಿದ 5 ಅಶಾ ಕಾರ್ಯಕರ್ತರಿಗೆ ತಲಾ ₹ 3ಸಾವಿರ ಪ್ರೋತ್ಸಾಹ ಧನ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಗೆ ₹ 25ಸಾವಿರ ದೇಣಿಗೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಸಂಸ್ಥೆ ವತಿಯಿಂದ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು. ಜಿಲ್ಲೆಯ ಲಿಂಗಸುಗೂರಿನಲ್ಲಿ ಸಂಸ್ಥೆಯ ನೂತನ ಶಾಖೆಯನ್ನು ತೆರೆಯಲಾಗುವುದು’ ಎಂದರು.

ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ಇಲ್ಲೂರು, ನಿರ್ದೇಶಕರಾದ ರಾಮಾಂಜನೇಯ ಶೆಟ್ಟಿ, ಬಸವಂತಕುಮಾರ, ಚಂದ್ರಕಾಂತ ಇಲ್ಲೂರು, ಶಂಭುಲಿಂಗಯ್ಯಸ್ವಾಮಿ ಹಿರೇಮಠ, ಬೆನಕಯ್ಯ ಶೆಟ್ಟಿ, ಸತೀಶ ಇಲ್ಲೂರು, ಮೆಹಬೂಬ್ ಖಾನ್, ದತ್ತಾತ್ರೇಯ ಮೇಟಿ, ದೇವರಾಜ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು