ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕಲಚೇತನರ ಕುಂದುಕೊರತೆ ಸಭೆ ನಡೆಸಿ: ಜಿಲ್ಲಾಧಿಕಾರಿ

Last Updated 2 ಸೆಪ್ಟೆಂಬರ್ 2021, 15:17 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ವಿಕಲಚೇತನರ ಕುಂದು ಕೊರತೆ ಸಭೆ ನಡೆಸಬೇಕು. 2016ರಲ್ಲಿ ಅನುಷ್ಠಾನಗೊಂಡ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿ ಜಿಲ್ಲಾ ವಿಕಲಚೇತನರ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರುಗುರುವಾರ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.

ವಿಕಲಚೇತನರ ಶೇ 5 ರಷ್ಟು ಅನುದಾನದಡಿ ಜಿಲ್ಲಾಮಟ್ಟದ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ಮಾಡಬೇಕು. ನೂತನ ತಾಲ್ಲೂಕು ಸಿರವಾರ, ಮಸ್ಕಿಗೆ ಎಂ.ಆರ್. ಡಬ್ಲ್ಯೂ ಕಾರ್ಯಕರ್ತರನ್ನು ನೇಮಕ ಮಾಡಬೇಕು ಆಗ್ರಹಿಸಿದರು.

ಸಂಸದರ ಅನುದಾನದಲ್ಲಿ ಸುಮಾರು 12 ವರ್ಷಗಳಿಂದ ಹಾಗೂ 7 ತಾಲ್ಲೂಕುಗಳ 3 ವರ್ಷದಿಂದ ಗ್ರಾಮೀಣ ಕ್ಷೇತ್ರಗಳಲ್ಲಿ ಕೂಡಲೇ ತ್ರಿಚಕ್ರ ವಾಹನಗಳನ್ನು ಮಂಜೂರು ಮಾಡಬೇಕು. ತಾಲ್ಲೂಕು ಪಂಚಾಯಿತಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗಳಲ್ಲಿ ಶೇ 5ರ ಯೋಜನೆ ಅಡಿಯಲ್ಲಿ 2018-19 ರಿಂದ ಇಲ್ಲಿಯವರಗೆ ಅನುದಾನದ ಬಿಡುಗಡೆ ಯಾಗಿದ್ದು ಸದ್ಬಳಕೆಗೆ ಕ್ರಮ ತೆಗೆದುಕೊಳ್ಳಬೇಕು.

ಜಿಲ್ಲಾ ವಿಕಲಚೇತನರ ಪುನರ್ ವಸತಿ ಕೇಂದ್ರ ಯೋಜನೆಗಳ ಅನುಷ್ಠಾನಗೊಳ್ಳದೇ ಕೇಂದ್ರದಲ್ಲಿ ಯುಡಿಐಡಿ ಕಾರ್ಡುಗಳು ಮಾತ್ರ ವಿತರಣೆಗೆ ಸೀಮಿತವಾಗಿವೆ. ಇದರಿಂದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಕೂಡಲೇ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಹಾಗೂ ಒಂದು ಕುಟುಂಬದಲ್ಲಿ ಒಬ್ಬ ವಿಕಲಚೇತನರಿದ್ದರೆ ಆ ಕುಟುಂಬಕ್ಕೆ ಅಂತ್ಯೋದಯ ಕಾರ್ಡ್ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ಒಕ್ಕೂಟದ ಜಿಲ್ಲಾ ಗೌರವಾದ್ಯಕ್ಷ ಹೊನ್ನಪ್ಪ, ಜಿಲ್ಲಾಧ್ಯಕ್ಷ ಎಂ.ಡಿ.ಜಾಫರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಪ್ಪ ಟೈಲರ್, ಪದಾಧಿಕಾರಿ ಮರಿಸ್ವಾಮಿ, ನಾಗರಾಜ, ಅಂಬರೀಶ, ಮೌಲಸಾಬ್, ವೆಂಕೋಬಾ, ತಿಮ್ಮಪ್ಪ, ವೀರೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT