ಶುಕ್ರವಾರ, ಜನವರಿ 22, 2021
28 °C

ಗಡಿಭಾಗದ ಬಡ ವಿದ್ಯಾರ್ಥಿ ಐಐಐಟಿಗೆ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಕ್ತಿನಗರ: ತೆಲಂಗಾಣ ರಾಜ್ಯದ ನಿರ್ಮಲ್ ಜಿಲ್ಲೆಯ ಬಾಸರದಲ್ಲಿ ಇರುವ ಐಐಐಟಿಗೆ ಗಡಿಭಾಗದ ಕೃಷ್ಣಾ ಗ್ರಾಮದ ವಿದ್ಯಾರ್ಥಿ ಮಲ್ಲಿಕಾರ್ಜುನ ಆಯ್ಕೆ ಆಗಿದ್ದಾನೆ.

ಮಲ್ಲಿಕಾರ್ಜುನ ಮೂಲತಃ ಚೇಗುಂಟ ಗ್ರಾಮದವರು. ಗಡಿಭಾಗದ ಕೃಷ್ಣಾ ಗ್ರಾಮದ ಪ್ರೌಢಶಾಲೆಯ 10ನೇ ತರಗತಿಯಲ್ಲಿ ಶೇಕಡಾ 98 ರಷ್ಟು ಅಂಕಗಳನ್ನು ಪಡೆದಿದ್ದ. ವಿದ್ಯಾಭ್ಯಾಸಕ್ಕಾಗಿ ಅಗತ್ಯ ದಾಖಲೆಗಳೊಂದಿಗೆ ಆನ್‌ಲೈನ್‌ ಮೂಲಕ ಐಐಐಟಿ ಸಂಸ್ಥೆಗೆ ಅರ್ಜಿ ಸಲ್ಲಿಸಿದ್ದ.

ಮಲ್ಲಿಕಾರ್ಜುನ ಅವರು, ಐಐಐಟಿಗೆ ಆಯ್ಕೆಯಾಗಿದ್ದು ಸಂತಸ ತಂದಿದೆ. ಅವನ ವಿದ್ಯಾಭ್ಯಾಸಕ್ಕಾಗಿ ಎಲ್ಲಾ ರೀತಿಯ ಆರ್ಥಿಕ ಸಹಾಯ ನೀಡುವುದಾಗಿ ಎಂದು ಗಡಿಭಾಗದ ಕೃಷ್ಣಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಿಜಾಮುದ್ದೀನ್ ಅವರು ಹೇಳಿದರು.

ಎಸ್‌ಎಂಸಿ ಛೇರ್‌ಮನ್ ರಾಜು, ಜಿ.ನರಸಿಂಹಯ್ಯ ಶೆಟ್ಟಿ , ಬಿ.ಸುರೇಶ, ಶಾಹೀದ್, ಆರ್.ಕೃಷ್ಣಯ್ಯ, ಟಿ.ರೇಣುಕಾ, ಭಾಗ್ಯಲಕ್ಷ್ಮೀ , ಗೋಪಾಲ, ರೇಣುಕಾದೇವಿ, ಚಂದ್ರಶೇಖರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.