ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಿದ್ದಲು ಅಕ್ರಮ ಸಂಗ್ರಹ: ಆರ್‌ಟಿಪಿಎಸ್, ವೈಟಿಪಿಎಸ್‌ಗೆ ತನಿಖಾ ತಂಡ ಭೇಟಿ

Published 23 ನವೆಂಬರ್ 2023, 0:00 IST
Last Updated 23 ನವೆಂಬರ್ 2023, 0:00 IST
ಅಕ್ಷರ ಗಾತ್ರ

ಶಕ್ತಿನಗರ (ರಾಯಚೂರು ಜಿಲ್ಲಾ): ಕಲ್ಲಿದ್ದಲು ಅಕ್ರಮ ಸಂಗ್ರಹ ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ಆರ್‌ಟಿಪಿಎಸ್ ಮತ್ತು ವೈಟಿಪಿಎಸ್ ವಿದ್ಯುತ್ ಘಟಕಗಳಿಗೆ ಬೆಂಗಳೂರಿನಿಂದ ತನಿಖಾ ತಂಡ ಬುಧವಾರ ಭೇಟಿ ನೀಡಿ ಪರಿಶೀಲಿಸಿತು.

ಆರ್‌ಟಿಪಿಎಸ್ ಮತ್ತು ವೈಟಿಪಿಎಸ್ ವಿದ್ಯುತ್ ಘಟಕಗಳಿಗೆ ಸರಬರಾಜು ಮಾಡುವ ಕಲ್ಲಿದ್ದಲು ಅನಧಿಕೃತ ಜಾಗದಲ್ಲಿ ಸಂಗ್ರಹವಾಗಿದ್ದ ಸ್ಥಳಕ್ಕೆ ತನಿಖಾ ತಂಡದ ಅಧಿಕಾರಿ ಯತಿರಾಜ್ ರಘುನಾಥ, ಅಜಯ ಮತ್ತು ಕೃಷ್ಣಾಮೂರ್ತಿ ಅವರು ಭೇಟಿ ನೀಡಿ ಪರಿಶೀಲಿಸಿದರು.

ಕಲ್ಲಿದ್ದಲು ವ್ಯಾಗಿನ್ ಸ್ವಚ್ಛತಾ ಕಾರ್ಯದ ಗುತ್ತಿಗೆಯನ್ನು ಮೂರು ವರ್ಷಗಳ ಅವಧಿಯವರೆಗೆ ಆಂಧ್ರಪ್ರದೇಶದ ಗುಂತಕಲ್‌ನ ಗುತ್ತಿಗೆದಾರೊಬ್ಬರಿಗೆ ನೀಡಲಾಗಿತ್ತು. ಗುತ್ತಿಗೆದಾರ ಮತ್ತು ಅಧಿಕಾರಿಗಳ ಒಳ ಒಪ್ಪಂದದಿಂದ ಕಲ್ಲಿದ್ದಲನ್ನು ಅನಧಿಕೃತ ಜಾಗದಲ್ಲಿ ಸಂಗ್ರಹ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು.

‘ವ್ಯಾಗನ್‌ನಲ್ಲಿ ತುಂಬಿದ್ದ ಕಲ್ಲಿದ್ದಲನ್ನು ವೈಟಿಪಿಎಸ್ ಮತ್ತು ಆರ್‌ಟಿಪಿಎಸ್ ಪ್ರಾಂಗಣದಲ್ಲಿ ಸಂಪೂರ್ಣವಾಗಿ ಸುರಿಯಬೇಕು. ವ್ಯಾಗನ್ ಖಾಲಿಯಾದ ನಂತರವೇ ಅಲ್ಲಿಂದ ರೈಲು ಚಲಿಸಲು ಹಸಿರು ನಿಶಾನೆ ನೀಡಬೇಕು. ಆದರೆ, ವ್ಯಾಗನ್‌ಗಳಲ್ಲಿ ದೊಡ್ಡ ಪ್ರಮಾಣದ ಕಲ್ಲಿದ್ದಲುನ್ನು ಉಳಿಸಿ, ವಾಪಸ್ ಕಳುಹಿಸಲಾಗುತ್ತಿತ್ತು ಎಂಬ ವಿಷಯ ಬಹಿರಂಗವಾಗಿದೆ. ಈ ಸಂಬಂಧ ವರದಿಯನ್ನು ಮೂರು ದಿನದೊಳಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ತನಿಖಾ ತಂಡ ನೀಡಲಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತನಿಖಾ ತಂಡದ ಅಧಿಕಾರಿಗಳು, ಆರ್‌ಟಿಪಿಎಸ್ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಸುರೇಶಬಾಬು ಅವರೊಂದಿಗೂ ಚರ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT