ಲಿಂಗಸುಗೂರು: ರಂಭಾಪುರಿ ಪೀಠದ ಶರನ್ನವರಾತ್ರಿ ದಸರಾ ದರ್ಬಾರ ಧರ್ಮ ಸಮ್ಮೇಳನ ಮುಂದಿನ ವರ್ಷ 2023ಕ್ಕೆ ಲಿಂಗಸುಗೂರಿಗೆ ನೀಡುವಂತೆ ಲಿಂಗಸುಗೂರಿನ ಭಕ್ತರು ರಂಭಾಪುರಿ ಪ್ರಸನ್ನ ರೇಣುಕ ವೀರಸೋಮೇಶ್ವರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಯಲ್ಲಿ ಮನವಿ ಮಾಡಿದರು.

ಸೋಮವಾರ ಹಾಸನ ಜಿಲ್ಲೆ ಬೇಲೂರಲ್ಲಿ ನಡೆದ ಸಭೆಯಲ್ಲಿ ದೇವರಭೂಪುರದ ಅಭಿನವ ಗಜದಂಡ ಶಿವಾಚಾರ್ಯರ ನೇತೃತ್ವದಲ್ಲಿ ಸಚಿವ ಸಿ.ಸಿ ಪಾಟೀಲ, ಶಾಸಕ ಎಚ್.ಡಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಸಹಯೋಗದಲ್ಲಿ ಭಕ್ತರು ಸಾಂಪ್ರದಾಯಿಕವಾಗಿ ಆಹ್ವಾನಿಸಿದರು.

ಜಾತಿ, ಧರ್ಮ ಧರ್ಮಗಳ ಮಧ್ಯೆ ಸಂಘರ್ಷಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಶರಣರು, ಸಂತರು, ಸೋಫಿಗಳು ನಡೆದಾಡಿದ ಭಾವೈಕ್ಯತೆಗೆ ಹೆಸರಾದ ತಾಲ್ಲೂಕಿನಲ್ಲಿ ರಂಭಾಪುರಿ ಪೀಠದ ದಸರಾ ದರ್ಬಾರ ಧರ್ಮ ಸಮ್ಮೇಳನ ನಡೆಸಲು ಒಪ್ಪಿಗೆ ನೀಡಬೇಕು ಎಂದು ಕೋರಿದರು.

ರಂಭಾಪುರಿ ಪ್ರಸನ್ನ ರೇಣುಕ ವೀರಸೋಮೇಶ್ವರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ‘32ನೇ ದಸರಾ ದರ್ಬಾರ ಧರ್ಮ ಸಮ್ಮೇಳನ ಲಿಂಗಸುಗೂರಲ್ಲಿ ಆಯೋಜಿಸಲು ಒಪ್ಪಿಗೆ ನೀಡಿದ್ದೇವೆ’ ಎಂದು ಘೋಷಿಸಿದರು.

ಶರನ್ನವರಾತ್ರಿ ದಸರಾ ದರ್ಬಾರ ಧರ್ಮ ಸಮ್ಮೇಳನ ಸೇವಾ ಸಮಿತಿ ಮುಖಂಡ ಮಲ್ಲಣ್ಣ ವಾರದ ನೇತೃತ್ವದಲ್ಲಿ ವಿವಿಧ ಸಮುದಾಯ ಮುಖಂಡರಾದ ಅಮರೇಶ ಮೇದಿನಾಪುರೆ, ಶರಣಗೌಡ ಯಲಗಲದಿನ್ನಿ, ಜಂಬಯ್ಯ ಹಿರೇಮಠ, ಶಿವಕುಮಾರ ನಂದಿಕೋಲಮಠ, ಗವಿಸಿದ್ದಪ್ಪ ಹೆಸರೂರು, ಅಮರೇಶ ಛಾವಣಿ, ಶ್ರೀಕಾಂತ ಮಠ, ಮಲ್ಲಿಕಾರ್ಜುನ ನಾಡಗೌಡ, ಚಿದಾನಂದ ಬುದ್ದಿನ್ನಿ, ಅಮರೇಶ ಮಡಿವಾಳ, ಸಿದ್ದಲಿಂಗಪ್ಪ ಕುಂಬಾರ, ಅನಿಲಕುಮಾರ ಪೊಲೀಸ್ ಪಾಟೀಲ್, ಶ್ರೀಧರ ಕಿರಗಿ, ಪ್ರಕಾಶ್ ಸುಂಕದ ಘನಮಠದಯ್ಯ ಮಹಾಂತಿನಮಠ, ಅಮರೇಶ ಬಲ್ಲಟಗಿ, ಚೆನ್ನಯ್ಯ ಕಾಳಹಸ್ತಿಮಠ, ಹನುಮಂತ ಹೂಗಾರ, ಮಹೇಶ ಮಡಿವಾಳ, ಮಲ್ಲಿಕಾರ್ಜುನಗೌಡ ಚಿಲ್ಕಾರಾಗಿ, ಈರಮ್ಮ ಹಿರೇಮಠ, ಚೈತ್ರಾ ಗೌಡ್ರ, ಅಂಬುಜಾ ಹಿರೇಮಠ, ಗುರುಬಾಯಿ ಹಿರೇಮಠ, ಸಿದ್ದಮ್ಮ ಬಳಿಗೇರ, ಸಂಗಮ್ಮ ಹಿರೇಮಠ, ವಿಜಯಲಕ್ಷ್ಮಿ ಹಿರೇಮಠ, ಮಲ್ಲಮ್ಮ ವಸ್ತ್ರದ, ಗೀತಮ್ಮ, ನಾಗಮ್ಮ ಭೀಮಸೇನರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.