ಜಾಲಹಳ್ಳಿ: ಪಟ್ಟಣದ ಮಾನಸಿಕ ಅಸ್ವಸ್ಥೆ ರಂಗಮ್ಮ ಅವರನ್ನು ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಆಸ್ಪತ್ರೆ ಸಿಬ್ಬಂದಿ ಸೇರಿ ಭಾನುವಾರ ರಿಮ್ಸ್ ಆಸ್ಪತ್ರೆಗೆ ಸೇರಿಸಿದ್ದಾರೆ.

ಕಳೆದ ಒಂದು ವರ್ಷದಿಂದ ರಂಗಮ್ಮ ಅರೆ ಬಟ್ಟೆಯಲ್ಲಿಯೇ ತಿಂಥಣಿ ಬ್ರಿಡ್ಜ್, ದೇವದುರ್ಗ ಮುಖ್ಯ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವುದು. ಎಲ್ಲೆಂದರಲ್ಲಿ ಮಲಗುವುದು, ಅಲ್ಲಿಯೇ ಮಲ–ಮೂತ್ರ ವಿಸರ್ಜನೆ ಮಾಡುತ್ತಿದ್ದರಿಂದ ಜನ ಬೇಸತ್ತು ಹೋಗಿದ್ದರು.

ಅಲ್ಲದೇ ಗ್ರಾ.ಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಹಾಗೂ ಪಿಎಸ್ಐ ವೈಶಾಲಿ ಝಳಕಿ ಅವರು ಮಾನಸಿಕ ಅಸ್ವಸ್ಥೆ ರಂಗಮ್ಮ ಅವರ ಕುಟುಂಬಸ್ಥರಿಗೆ ಅನೇಕ ಬಾರಿ ಚಿಕಿತ್ಸೆ ಕೊಡಿಸಲು ಸಲಹೆ ನೀಡಿದ್ದರು.

ಗ್ರಾ.ಪಂ ಸದಸ್ಯರಾದ ಕುಮಾರ ಚಪ್ಪಳಕಿ, ಸರಸ್ವತಿ ತೊಗರಿ, ಸಲ್ಮಾಬೇಗಂ ನಾಶಿ, ಹುಲಗಮ್ಮ, ರಾಜು ತವಗ, ಮಕ್ತೂಮ್ ಪಾರಸಿ, ಪಿಡಿಒ ನರಸಪ್ಪ ಸೇರಿ ಕುಟುಂಬದವರಿಗೆ ತಿಳಿ ಹೇಳಿ ಶನಿವಾರದಿಂದ ನಿರಂತರವಾಗಿ ಪ್ರಯತ್ನ ಮಾಡಿ ಭಾನುವಾರ ಆಸ್ಪತ್ರೆಯ ಆಂಬುಲೆನ್ಸ್ನಲ್ಲಿ ಸಾಗಿಸಿದರು.

ರಿಮ್ಸ್ ಆಸ್ಪತ್ರೆಯ ವೈದ್ಯರ ಜತೆ ನಾನು ಮಾತನಾಡಿದ್ದೇನೆ. ಮಾನಸಿಕ ಅಸ್ವಸ್ಥ ಮಹಿಳೆ ಚಿಕಿತ್ಸೆ ನಂತರ ಸಂಪೂರ್ಣ ಗುಣಮುಖರಾದ ಮೇಲೆ ನಾವು ಮರಳಿ ಕಳಿಸುತ್ತೇವೆ ಎಂದು ನನಗೆ ದೂರವಾಣಿಯಲ್ಲಿ ತಿಳಿಸಿದ್ದಾರೆ ಎಂದು ಪಿಎಸ್ಐ ವೈಶಾಲಿ ಝಳಕಿ’ ಪ್ರಜಾವಾಣಿಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.