ರಾಯಚೂರು: ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಇಲ್ಲಿಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ ಭಾನುವಾರ ನಡೆಸಿದ 2024–25ನೇ ಸಾಲಿನ ಕಲಬುರಗಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಪುರುಷ ಹಾಗೂ ಮಹಿಳೆಯರ ವಿಭಾಗದ ಬ್ಯಾಸ್ಕೆಟ್ ಪಂದ್ಯಾವಳಿಯಲ್ಲಿ ಟ್ರೋಫಿ ಗೆದ್ದುಕೊಂಡು ಇತಿಹಾಸ ಸೃಷ್ಟಿಸಿದವು.
ಬ್ಯಾಸ್ಕೆಟ್‌ಬಾಲ್ ಪುರುಷರ ಫೈನಲ್‌ನಲ್ಲಿ ರಾಯಚೂರು ತಂಡವು ಬಳ್ಳಾರಿ ತಂಡವನ್ನು 73–26 ಅಂಕಗಳಿಂದ ಪರಾಭವಗೊಳಿಸಿ ಟ್ರೋಫಿ ಗೆದ್ದುಕೊಂಡಿತು.
ಮೊದಲ ಸೆಮಿಫೈನಲ್‌ನಲ್ಲಿ ಬಳ್ಳಾರಿ ತಂಡವು ಕಲಬುರಗಿ ತಂಡವನ್ನು 58–40 ಅಂಕಗಳಿಂದ ಸೋಲಿಸಿ ದರೆ, ಇನ್ನೊಂದು ಫೈನಲ್‌ನಲ್ಲಿ ರಾಯಚೂರು ತಂಡವು ಕೊಪ್ಪಳ ತಂಡವನ್ನು 52–18 ಅಂಕಗಳಿಂದ ಮಣಿಸಿ ಫೈನಲ್ ಪ್ರವೇಶಿಸಿತು.
ರಾಯಚೂರು ತಂಡವನ್ನು ಸಂದೀಪ ಶೇಖರ, ವೈಭವ ಚೌಧರಿ, ಅಜಯಕುಮಾರ ಕೆ.ಬ್ರಹ್ಮಯ್ಯ, ಶ್ರವಣಕುಮಾರ ಶಮಶಾಲಪ್ಪ, ವೆಂಕಟೇಶ್ ಎಲ್, ಕಾರ್ತಿಕ ರೆಡ್ಡಿ, ಶಿವಶರಣ ರೆಡ್ಡಿ, ಬರ್ನಾಬಾಸ್ ಶಮಶಾಲಪ್ಪ, ಅಭಿಷೇಕಕುಮಾರ, ಸೃಜನ ಸಿ.ಬಿ. ವಿಭವ, ಆಕಾಶಕುಮಾರ ಪ್ರತಿನಿಧಿಸಿದ್ದರು.
ಪುರುಷರ ವಿಭಾಗದಲ್ಲಿ ಒಟ್ಟು ಆರು ತಂಡಗಳು ನೋಂದಣಿ ಮಾಡಿಕೊಂಡಿದ್ದವು.
ಮಹಿಳೆಯರ ವಿಭಾಗ: ರಾಯಚೂರು ತಂಡಕ್ಕೆ ಟ್ರೋಫಿ
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಇಲ್ಲಿಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ ಭಾನುವಾರ ನಡೆಸಿದ 2024–25ನೇ ಸಾಲಿನ ಕಲಬುರಗಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಮಹಿಳೆಯರ ವಿಭಾಗದ ಬ್ಯಾಸ್ಕೆಟ್ ಪಂದ್ಯಾವಳಿಯಲ್ಲಿ ರಾಯಚೂರು ತಂಡ ಟ್ರೋಫಿ ಗೆದ್ದುಕೊಂಡಿದೆ.
ರಾಯಚೂರು ತಂಡವು ಬಳ್ಳಾರಿ ತಂಡವನ್ನು 10–8 ಅಂಕಗಳಿಂದ ಸೋಲಿಸಿತು. ಬಳ್ಳಾರಿ ಕ್ರೀಡಾಪಟುಗಳು ಪ್ರಬಲ ಸ್ಪರ್ಧೆ ಒಡ್ಡಿದರೂ ರಾಯಚೂರು ತಂಡದವರು ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿಯನ್ನು ಗೆದ್ದುಕೊಂಡರು.
ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಪೈಕಿ ಮೂರು ತಂಡಗಳು ಮಾತ್ರ ಹೆಸರು ನೋಂದಾಯಿಸಿಕೊಂಡಿದ್ದವು. ಮೊದಲ ಸೆಮಿಫೈನಲ್‌ನಲ್ಲಿ ಬೀದರ್–ಬಳ್ಳಾರಿ ಮಧ್ಯೆ ನಡೆದ ಪಂದ್ಯದಲ್ಲಿ ಬೀದರ್ ತಂಡ 8–2 ಅಂಕಗಳಿಂದ ಹೀನಾಯವಾಗಿ ಸೋಲು ಅನುಭವಿಸಿತು.
ಇನ್ನೊಂದು ಸೆಮಿಫೈನಲ್‌ನಲ್ಲಿ ಒಂದು ತಂಡ ಬಾರದ ಕಾರಣ ರಾಯಚೂರು ನೇರವಾಗಿ ಫೈನಲ್ ಪ್ರವೇಶಿಸಿತು. ಫೈನಲ್‌ನಲ್ಲಿ ಬಳ್ಳಾರಿ ತಂಡವನ್ನು ಸೋಲಿಸಿತು.
ರಾಯಚೂರು ತಂಡವನ್ನು ಶ್ವೇತಾ ಪಾಟೀಲ, ಇಂದ್ರಜಾ ಜಿ, ತ್ವಿಶಾ ಕಳಸೆಕರ್, ಕೀರ್ತಿ, ಪೂಜಲಾ ಯಮಿನಿ, ಸ್ನೇಹಾ ಪಾಟೀಲ, ಲಕ್ಷ್ಮಿ, ಲಕ್ಷಿತಾ, ಸಮುಂದ್ಯಥಾ, ವೈಷ್ಣವಿ ಪಿ.ಕೆ, ಅನುಶಾ ಸೋನಬಾಳ್, ರಮ್ಯಕೃಷ್ಣ ಪಟವಾರಿ ತಂಡವನ್ನು ಪ್ರತಿನಿಧಿಸಿದ್ದರು.
ಮಹಿಳೆಯರ ವಿಭಾಗದಲ್ಲಿ ಕೇವಲ ಮೂರು ತಂಡಗಳು ಹೆಸರು ನೋಂದಣಿ ಮಾಡಿಕೊಂಡಿದ್ದವು. ನಿರ್ಣಾಯಕರಾಗಿ ರಮೇಶ ಸಾಂಬಾಳ, ನರಸಿಂಹ, ರೂಪೇಶ, ವೆಂಕಟೇಶ ಹಾಗೂ ಶ್ರವಣ ಕಾರ್ಯನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.