ಸಿಂಧನೂರು: ತಮಿಳುನಾಡು ರಾಜ್ಯದ ಚೆನ್ನೈನ ತಾರಾಮಣಿಯಲ್ಲಿ ನಡೆದ ಕಲಾಂಸ್ ಗೋಲ್ಡನ್ ಅವಾಡ್ರ್ಸ್-2023 ಕಾರ್ಯಕ್ರಮದಲ್ಲಿ ಸಿಂಧನೂರಿನ ಕಾರುಣ್ಯ ಆಶ್ರಮದ ಆಡಳಿತಾಧಿಕಾರಿ ಡಾ.ಚನ್ನಬಸವಸ್ವಾಮಿ ಹಿರೇಮಠ ಹಾಗೂ ಸೇವಾಸಿರಿ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಪ್ರದೀಪ್ ಪೂಜಾರಿ ಅವರಿಗೆ ಅಬ್ದುಲ್ ಕಲಾಂ ಗೋಲ್ಡನ್ ಅವಾರ್ಡ್ ಪ್ರದಾನ ಮಾಡಿ ಗೌರವಿಸಲಾಯಿತು.
ಸಿಂಧನೂರಿನಲ್ಲಿ ಕಾರುಣ್ಯ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ದಿಮಾಂದ್ಯ ಆಶ್ರಮದ ಮೂಲಕ ಅನಾಥ ವೃದ್ಧರಿಗೆ ಆಶ್ರಯ ನೀಡಿ ಸೇವೆ ಮಾಡುತ್ತಿರುವ ಡಾ.ಚನ್ನಬಸವಸ್ವಾಮಿ ಹಾಗೂ ಸೇವಾಸಿರಿ ಟ್ರಸ್ಟ್ ಮೂಲಕ ಪರಿಸರ ಸಂರಕ್ಷಣೆ ಮಾಡುತ್ತಿರುವ ಪ್ರದೀಪ್ ಪೂಜಾರಿ ಅವರ ಸಮಾಜ ಸೇವೆಯನ್ನು ಗುರುತಿಸಿ ಕಲಾಂ ವಲ್ರ್ಡ್ ರೆಕಾಡ್ರ್ಸ್‍ನ ಸಂಸ್ಥಾಪಕ ಅಧ್ಯಕ್ಷ ಟಿ.ಕುಮಾರವೆಲ್ ಹಾಗೂ ಚೀಫ್ ಎಕ್ಸಿಕ್ಯೂಟಿವ್ ಅಧಿಕಾರಿ ಎಲ್.ವಿ.ಜೆ ಲೋಕೇಶ್ ಅವರು ಪ್ರಶಸ್ತಿ ನೀಡಿದರು.
ಕಾರುಣ್ಯ ಆಶ್ರಮದ ಆಡಳಿತಾಧಿಕಾರಿ ಡಾ.ಚನ್ನಬಸವಸ್ವಾಮಿ ಹಿರೇಮಠ ಅವರು ‘ನಮ್ಮ ಅನಾಥಪರ ಸೇವೆಯನ್ನು ಪರಿಗಣಿಸಿ ನೀಡಿರುವ ಈ ಪ್ರಶಸ್ತಿಗಳು ಸಾಮಾಜಿಕ ಜವಾಬ್ದಾರಿ ಮತ್ತಷ್ಟು ಹೆಚ್ಚಿಸಿವೆ. ಅನ್ಯರಾಜ್ಯದಲ್ಲಿ ಸಮಾಜ ಸೇವೆ ಮಾಡುತ್ತಿರುವವರನ್ನು ಗುರುತಿಸಿ ಈ ಸಂಸ್ಥೆಯಿಂದ ಪ್ರಶಸ್ತಿ ನೀಡುತ್ತಿರುವ ಕಾರ್ಯ ಮಹತ್ವದ್ದಾಗಿದೆ. ಹೆತ್ತ ತಂದೆ ತಾಯಿಗಳನ್ನು ಎಲ್ಲ ಮಕ್ಕಳು ಪ್ರೀತಿ, ಗೌರವದಿಂದ ಆರೈಕೆ ಮಾಡಬೇಕು’ ಎಂದು ಕರೆ ನೀಡಿದರು. ಸಂಸ್ಥೆಯ ವಿಕ್ರಂ ಸೇರಿದಂತೆ ಬರ್ಮಾಕ್ಯಾಂಪ್‍ನ ಅನೇಕರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.