ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಟ್ಟಿಚಿನ್ನದಗಣಿ: ಕಮಲಮ್ಮನಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

Last Updated 30 ಅಕ್ಟೋಬರ್ 2022, 15:55 IST
ಅಕ್ಷರ ಗಾತ್ರ

ಹಟ್ಟಿಚಿನ್ನದಗಣಿ: ಹಟ್ಟಿ ಪಟ್ಟಣದ ನಿವಾಸಿ ಸೂಲಗಿತ್ತಿ ಕಮಲಮ್ಮ ಅವರಿಗೆ ಈ ಬಾರಿ ಜಾನಪದ ವಿಭಾಗದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಕಮಲಮ್ಮ ಅವರು 500 ಕ್ಕೂ ಅಧಿಕ ಹೆರಿಗೆಗಳನ್ನು ಮಾಡಿಸಿದ್ದಾರೆ. ತಾಯಿಗೆ ಹೆರಿಗೆ ಮಾಡಿಸಲು ಸಹಾಯ ಮಾಡುತ್ತಾ, ಸೂಲಗಿತ್ತಿ ಕೆಲಸವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಕಮಲಮ್ಮ ಅವರಿಗೆ ಓದು ಬರಹ ಗೊತ್ತಿಲ್ಲ. ಆದರೆ ಇವರು ಬಹುಮುಖ ಜಾನಪದ ಪ್ರತಿಭಾವಂತರು.

ಸೋಬಾನೆ, ಜೋಗುಳ, ಬುರಾ ಕಥಾ, ಜಾನಪದ ಹಾಡುತ್ತಾರೆ. ಕಮಲಮ್ಮ ಅವರಲ್ಲಿ ಜಾನಪದ ಜ್ಞಾನದ ಭಂಡಾರವೇ ಇದೆ. ಅಲೆಮಾರಿ ಸಮುದಾಯದ ಇವರು ಗಿಡಮೂಲಿಕೆ ನೀಡುವಲ್ಲಿಯೂ ಪರಿಣಿತಿ ಪಡೆದುಕೊಂಡಿದ್ದಾರೆ. ಈ ಭಾಗದಲ್ಲಿ ಎಲೆಮರೆ ಕಾಯಿಯಂತೆ ಜನಪದ ಕಲೆಯನ್ನು ಬೆಳಸುತ್ತಾ ಬಂದಿದ್ದಾರೆ.

*
ನನಗೆ ಪ್ರಶಸ್ತಿ ಎಂದರೆ ಏನೆಂದು ತಿಳಿಯುವುದಿಲ್ಲ. ಅದನ್ನು ಅಕ್ಷರ ಜ್ಞಾನ ತಿಳಿದವರೆ ನನಗೆ ಅರ್ಥ ಮಾಡಿಸಬೇಕು ನನಗೆ ಬರಿ, ಹಾಡುಗಳನ್ನು ಹಾಡುವುದಂದರೆ ಇಷ್ಟ ಪ್ರಶಸ್ತಿ ಮುಖ್ಯವಲ್ಲ, ಜಾನಪದ ಹಾಡುಗಳನ್ನು ಉಳಿಸಿ ಬೆಳಸಬೇಕು, ಎನ್ನುವುದು ಆಶಯವಾಗಿದೆ.
- ಸೂಲಗಿತ್ತಿ ಕಮಲಮ್ಮ, ಜಾನಪದ ಹಾಡುಗಾರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT