ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಗಮನ ಸೆಳೆದ 'ಅಂಗವಿಕಲರ ಸ್ನೇಹಿ' ಮತಗಟ್ಟೆ ಕೇಂದ್ರ

Published 7 ಮೇ 2023, 8:25 IST
Last Updated 7 ಮೇ 2023, 8:25 IST
ಅಕ್ಷರ ಗಾತ್ರ

ಉಮಾಪತಿ ರಾಮೋಜಿ

ಶಕ್ತಿನಗರ: ಗ್ರಾಮೀಣ ವಿಧಾನಸಭಾ ಕ್ಷೇತ್ರದ ದೇವಸೂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತಗಟ್ಟೆ 18 ಸಂಖ್ಯೆಯ ಬೂತ್‌ನಲ್ಲಿ ಅಂಗವಿಕಲ ಸ್ನೇಹಿ ಮತಗಟ್ಟೆ ಕೇಂದ್ರ ತೆರೆಯಲಾಗಿದ್ದು, ನೋಡುಗರ ಗಮನ ಸೆಳೆಯುತ್ತಿದೆ. 

ವಿಧಾನಸಭೆ ಚುನಾವಣೆಗೆ ಬಿರುಸಿನ ಸಿದ್ಧತೆ ನಡೆಯುತ್ತಿದ್ದು ಮೇ 10 ರಂದು ನಡೆಯುವ ಮತದಾನಕ್ಕೆ ಅಂಗವಿಕಲ ಮತದಾರರನ್ನು ಆಕರ್ಷಿಸಲು ಚುನಾವಣಾ ಆಯೋಗ ಕಸರತ್ತು ನಡೆಸುತ್ತಿದೆ.

ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ದೇವಸೂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತಗಟ್ಟೆ 18 ಸಂಖ್ಯೆಯ ಬೂತ್‌ನಲ್ಲಿ ಅಂಗವಿಕಲ ಸ್ನೇಹಿ ಮತಗಟ್ಟೆ ಕೇಂದ್ರ ತೆರೆಯಲಾಗಿದೆ.

ಚುನಾವಣೆಗಳಲ್ಲಿ ಅಂಗವಿಕಲರು ಅನಿವಾರ್ಯ ಕಾರಣಗಳಿಂದ ಮತದಾನ ಪ್ರಕ್ರಿಯೆಯಿಂದ ಹೊರಗುಳಿಯುತ್ತಿದ್ದರು. ಇದನ್ನು ಮನಗಂಡಿರುವ ಚುನಾವಣಾ ಆಯೋಗ, ಈ ಬಾರಿಯ ಚುನಾವಣೆಯಲ್ಲಿ ಅಂಗವಿಕಲರನ್ನು ಮತದಾನ ಕೇಂದ್ರಕ್ಕೆ ಕರೆತರಲು ಅನೇಕ ಕ್ರಮಗಳನ್ನು ಕೈಗೊಂಡಿದೆ.

’ಎಲ್ಲ ಮತಗಟ್ಟೆಗಳಿಗೂ ರ‍್ಯಾಂಪ್ ಅಳವಡಿಸಲಾಗಿದ್ದು, ಅಂಗವಿಕಲರು ಸರದಿ ಸಾಲಿನಲ್ಲಿ ನಿಲ್ಲುವ ಅಗತ್ಯವಿರುವುದಿಲ್ಲ. ಅಂಗವಿಕಲರ ಮತದಾನಕ್ಕೆ ಸಹಾಯಕ ಮಾಡಲು ಸಿಬ್ಬಂದಿ ನೇಮಕ, ಕುಡಿಯುವ ನೀರು, ಹೆಚ್ಚು ಅಂಗವಿಕಲ ಮತದಾರರಿರುವ ಮತಗಟ್ಟೆಯಲ್ಲಿ ಗಾಲಿ ಕುರ್ಚಿ ವ್ಯವಸ್ಥೆ ಕೈಗೊಳ್ಳಲಾಗುವುದು’ ಎಂದು ತಾಲ್ಲೂಕಿನ ನೋಡಲ್ ಅಧಿಕಾರಿ ಅಮರೇಶ ಯಾದವ್ ಹೇಳಿದರು.

ದೇವಸೂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 70 ಜನ ಅಂಗವಿಕಲ ಮತದಾರರು ಇದ್ದಾರೆ.  ಮತಗಟ್ಟೆಗೆ ಗ್ರಾಮ ಪಂಚಾಯಿತಿಯ ಶೇ 5ರಷ್ಟು ಅನುದಾನದಲ್ಲಿ ಮತಗಟ್ಟೆಗೆ ಮತದಾನ ಜಾಗೃತಿ ಸಂಬಂಧಿಸಿದಂತೆ ಬಣ್ಣ ಬಳೆಯಲಾಗಿದೆ. ಮತಗಟ್ಟೆ ಕೇಂದ್ರಕ್ಕೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶರಣಪ್ಪ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶೇಕಡಾ 100 ರಷ್ಟು ಮತದಾನ ಆಗಬೇಕು ಎನ್ನುವುದು ನಮ್ಮ ಆಶಯ. ಅಂಗವಿಕಲರಲ್ಲಿ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಇಂತಹ ಕ್ರಮ ಕೈಗೊಳ್ಳಲಾಗಿದೆ ಎಂದು ಶರಣಪ್ಪ ಪಾಟೀಲ್‌ ತಿಳಿಸಿದರು.

ತಾಲೂಕಿನ ನೋಡಲ್ ಅಧಿಕಾರಿ ಅಮರೇಶ ಯಾದವ್ , ಗ್ರಾಮ ಪಂಚಾಯಿತಿಯ ವಿ.ಆರ್.ಡಬ್ಲ್ಯೂ ಶಿವಲೀಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT