ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿ ಉಪಚುನಾವಣಿ: ಆರ್.ಬಸನಗೌಡ ಮತ ಚಲಾವಣೆ

Last Updated 18 ಏಪ್ರಿಲ್ 2021, 4:22 IST
ಅಕ್ಷರ ಗಾತ್ರ

ತುರ್ವಿಹಾಳ: ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್.ಬಸನಗೌಡ ತುರ್ವಿಹಾಳ, ಅವರು ತಮ್ಮ ಸ್ವ ಗ್ರಾಮವಾದ ತುರ್ವಿಹಾಳ ಪಟ್ಟಣದ ಮತಗಟ್ಟೆ ಕೇಂದ್ರದಲ್ಲಿ ಮತ ಹಾಕಿ, ಗೆಲುವಿನ ನಗೆ ಬೀರಿದರು.

ಶನಿವಾರ ಬೆಳಿಗ್ಗೆ ತಮ್ಮ ಮನೆ ದೇವರು ಹುಲಿಗೇಮ್ಮ ದೇವಿಗೆ ಪೂಜೆ ನೇರವೇರಿಸಿದರು. ನಂತರ ಶಂಕರಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದು, ಬೆಂಬಲಿಗರೊಂದಿಗೆ ನೇರವಾಗಿ ಮತದಾನ ಕೇಂದ್ರಕ್ಕೆ ಆಗಮಿಸಿದರು.

ಅವರು ರೈತರ ಸಂಕೇತವಾದ ಹಸಿರು ಶಾಲು ಹಾಕಿಕೊಂಡಿದ್ದು ವಿಶೇಷವಾಗಿತ್ತು.

ಪಟ್ಟಣದ ವಾರ್ಡ್-06 ರಲ್ಲಿ ಮತದಾನದ ಗುರುತಿನ ಚೀಟಿಯೊಂದಿಗೆ, ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ, 217ರ ಮತಗಟ್ಟೆ ಕೇಂದ್ರದಲ್ಲಿ ಬೆಳಿಗ್ಗೆ 8 ಗಂಟೆಗೆ ಮತ ಚಲಾಯಿಸಿದರು.

ನಂತರ ಮಾತನಾಡಿದ ಅವರು, ‘ಸ್ವಾಭಿಮಾನಿ ಮತದಾರರನ್ನು ಮಾರಾಟ ಮಾಡಿ ಅವಮಾನಗೊಳಿಸಿದ, ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರನ್ನು ಸೋಲಿಸಲು ಜನ ಕಾತುರದಿಂದ ಕಾಯುತ್ತಿದ್ದಾರೆ. ಚುನಾವಣಾ ಪ್ರಚಾರದ ಸಮಯದಲ್ಲಿ ಜನ ನನಗೆ ತೋರಿಸಿದ ಪ್ರೀತಿ, ಸಹಕಾರ ಹಾಗೂ ಸಿದ್ದರಾಮಯ್ಯ ಅವರ ಸರ್ಕಾರ ನೀಡಿದ ಜನಪರ ಯೋಜನೆಗಳಿಂದಲೇ ನನ್ನ ಗೆಲುವು ನಿಶ್ಚಿತ’ ಎಂಬ ಆಶಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT