ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯತೆ ರೂಪ ಕಾರುಣ್ಯ ಆಶ್ರಮ: ಡಾ.ಕೆ.ಶಿವರಾಜ

Published 7 ಆಗಸ್ಟ್ 2023, 15:31 IST
Last Updated 7 ಆಗಸ್ಟ್ 2023, 15:31 IST
ಅಕ್ಷರ ಗಾತ್ರ

ಸಿಂಧನೂರು: ಅನಾಥ ವೃದ್ಧರು, ವಯಸ್ಕ ಬುದ್ಧಿಮಾಂದ್ಯರನ್ನು ಹೆತ್ತ ತಂದೆ-ತಾಯಿಗಳಂತೆ ಕಂಡು ಪಾಲನೆ ಪೋಷಣೆ ಮಾಡುತ್ತಿರುವ ಕಾರುಣ್ಯ ಆಶ್ರಮದ ಸೇವೆಯು ಮಾನವೀಯತೆಯ ರೂಪವಾಗಿದೆ ಎಂದು ಸಹನಾ ಮಕ್ಕಳ ಆಸ್ಪತ್ರೆಯ ಡಾ.ಕೆ.ಶಿವರಾಜ ಅಭಿಪ್ರಾಯಪಟ್ಟರು.

ನಗರದ ಕಾರುಣ್ಯನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದ ಸಹನಾ ಮಕ್ಕಳ ಆಸ್ಪತ್ರೆಯ ದಿ.ಕೆ.ಗೋವಿಂದರೆಡ್ಡಿ ಚಾರಿಟೆಬಲ್ ಟ್ರಸ್ಟ್ ಹಾಗೂ ಸಂಕಲ್ಪ ಗ್ರಂಥಾಲಯ ಗೆಳೆಯರ ಬಳಗದಿಂದ ಭಾನುವಾರ ನಡೆದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

’ಇಲ್ಲಿ ಆಶ್ರಯ ಪಡೆದಿರುವ ಎಲ್ಲರೂ ನನ್ನ ತಂದೆ-ತಾಯಿಗಳ ಸಮಾನವಾಗಿದ್ದು, ಅವರ ಸೇವೆಗೆ ಸದಾ ಸಿದ್ಧನಿದ್ದೇನೆ’ ಎಂದರು.

ಡಾ.ಕೆ.ಶಿವರಾಜ ಅವರನ್ನು ಸನ್ಮಾನಿಸಯಿತು. ಗೌರವಾಧ್ಯಕ್ಷ ಶರಣು ಪಾ.ಹಿರೇಮಠ, ಕಾರ್ಯಾಧ್ಯಕ್ಷ ವೀರೇಶ ಯಡಿಯೂರಮಠ, ಆಡಳಿತಾಧಿಕಾರಿ ಚನ್ನಬಸಯ್ಯಸ್ವಾಮಿ ಹಿರೇಮಠ, ಸಲಹಾ ಸಮಿತಿ ಸದಸ್ಯ ಮಲ್ಲನಗೌಡ ಮಾವಿನಮಡ್ಗು, ಮುರಳಿಕೃಷ್ಣ ಮೆಕ್ಯಾನಿಕ್, ವೀರಭದ್ರಗೌಡ ಗಿಣಿವಾರ, ಸಂಕಲ್ಪ ಗ್ರಂಥಾಲಯ ಗೆಳೆಯರ ಬಳಗದ ರವಿಕುಮಾರ ಗಿಣಿವಾರ, ಕಾಮಣ್ಣ ಮೆದಿಕಿನಾಳ, ಬಸವರಾಜ ಹುಲ್ಲೂರು, ಸುರೇಶ ಕಂಬಳಿ ಒಳಬಳ್ಳಾರಿ, ಬಸವರಾಜ ಕ್ಯಾತನಹಟ್ಟಿ, ಲಿಂಗನಗೌಡ ಮೆದಿಕಿನಾಳ, ಮಂಜುನಾಥ ಮೂರನೇ ಮೈಲ್ ಕ್ಯಾಂಪ್, ಬಸವರಾಜ ಸುಲ್ತಾನಪುರ, ಸಿದ್ದಪ್ಪ ಕುಷ್ಟಗಿ, ಹನುಮೇಶ ಹೆಡಗಿನಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT