ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಟೇರಾ ಪೈರೆಸಿ; ಆರೋಪಿ ಬಂಧನ

Published 4 ಜನವರಿ 2024, 15:41 IST
Last Updated 4 ಜನವರಿ 2024, 15:41 IST
ಅಕ್ಷರ ಗಾತ್ರ

ರಾಯಚೂರು: ದರ್ಶನ್ ಅಭಿನಯದ ಕಾಟೇರ ಚಿತ್ರವನ್ನು ಪೈರಸಿ ಮಾಡುತ್ತಿದ್ದ ದೇವದುರ್ಗ ತಾಲ್ಲೂಕಿನ ಗಂಗಾನಾಯಕ್ ತಾಂಡದ  ದೇವದುರ್ಗ ತಾಲ್ಲೂಕಿನ ಗಂಗಾನಾಯಕ್ ತಾಂಡದ ಯುವಕ ಮೌನೇಶ್ ಎಂಬುವವರನ್ನು ಬಂಧಿಸಲಾಗಿದೆ. 

ಡಿ.29ರಂದು ಬಿಡುಗಡೆಯಾದ ಕಾಟೇರ ಚಿತ್ರದ ಪ್ರದರ್ಶನ ರಾಯಚೂರಿನಲ್ಲಿ ನಡೆಯುತ್ತಿದೆ. ಆರೋಪಿ ಪೈರಸಿ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ ಅವರ ಸೂಚನೆ ಮೇರೆಗೆ ಜ.2ರಂದು ಕಲ್ಯಾಣ ಕರ್ನಾಟಕ ಭಾಗದ ವಿತರಕ ಗುರು ದೇಶಪಾಂಡೆ ರಾಯಚೂರಿಗೆ ಬಂದು ವಿಚಾರಿಸಿದ್ದಾರೆ.

ಆರೋಪಿ ಮೌನೇಶ ಫೋನ್ ಪೇ ಮೂಲಕ ಚಿತ್ರವೊಂದಕ್ಕೆ ₹40 ಪಡೆದು ಟೆಲಿಗ್ರಾಂ ಆ್ಯಪ್ ಮೂಲಕ ಚಿತ್ರದ ಲಿಂಕ್ ಹಾಕುತ್ತಿರುವುದು ಧೃಢವಾಗಿದೆ. ಈ ಮಾಹಿತಿಯ ಆಧಾರದ ಮೇಲೆ 3ರಂದು ವಾದಿರಾಜ ಎಂಬುವವರು  ಸದರ್ ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲಿಸರು ಆರೋಪಿಯನ್ನು ಬಂಧಿಸಿದ್ದಾರೆ. 

ತನಿಖೆ ನಡೆಸುತ್ತಿರುವ ಪೊಲೀಸರು ಪ್ರಕರಣದ ಕಿಂಗ್ ಪಿನ್ ಉಪೇಂದ್ರ ಎನ್ನುವವನಿಗಾಗಿ  ಶೋಧ ನಡೆಸಿದ್ದಾರೆ ಚಿತ್ರ ಬಿಡುಗಡೆಯಾದಾಗಿನಿಂದ ಕಾಟೇರಾ ಚಿತ್ರ ಪೈರಸಿಯಾಗುತ್ತಿರುವ ಕಾರಣ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ ಹಾಗೂ ವಿತರಕ ಗುರುದೇಶಪಾಂಡೆ ಹಾಗು ಜಗದೀಶಗೆ ಆರ್ಥಿಕ ನಷ್ಟ ಉಂಟಾಗಿರುವ ಹಿನ್ನೆಲೆಯಲ್ಲಿ ಕಾಪಿ ರೈಟ್ ಆಕ್ಟ್  1957 ಹಾಗೂ ಭಾರತೀಯ ದಂಡ ಸಂಹಿತೆಯ ಕಲಂ 420 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT