ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತಾಳ | ‘ಅರ್ಲಿ ಬರ್ಡ್ಸ್‌’ ಬಗ್ಗೆ ಮಕ್ಕಳಿಗೆ ಮಾಹಿತಿ

Published 6 ಏಪ್ರಿಲ್ 2024, 15:19 IST
Last Updated 6 ಏಪ್ರಿಲ್ 2024, 15:19 IST
ಅಕ್ಷರ ಗಾತ್ರ

ಕವಿತಾಳ: ‘ಬಿಸಿಲು ಹೆಚ್ಚುತ್ತಿದ್ದು ನೀರು ಮತ್ತು ನೆರಳಿಗಾಗಿ ಪಕ್ಷಿಗಳು ಪರಿತಪಿಸುತ್ತಿವೆ, ಮನೆ ಎದುರಿನ ಗಿಡಗಳು ಅಥವಾ ಗೋಡೆ ನೆರಳಿನಲ್ಲಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಬೇಕು’ ಎಂದು ಗ್ರಂಥಾಲಯ ಮೇಲ್ವಿಚಾರಕ ಬಸವರಾಜ ದೊಡ್ಮನಿ ಮಕ್ಕಳಿಗೆ ಸಲಹೆ ನೀಡಿದರು.

ಸಮೀಪದ ಹೀರಾ ಗ್ರಾಮ ಪಂಚಾಯಿತಿಯ ಗ್ರಂಥಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಅರ್ಲಿ ಬರ್ಡ್ಸ್‌’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಿರವಾರ ತಾಲ್ಲೂಕಿನ ಅತ್ನೂರು ಮತ್ತು ಹೀರಾ ಗ್ರಾಮ ಪಂಚಾಯಿತಿ ಅರ್ಲಿ ಬರ್ಡ್ಸ್‌ ಯೋಜನೆಗೆ ಆಯ್ಕೆಯಾಗಿದ್ದು 5 ರಿಂದ 10ನೇ ತರಗತಿ ಮಕ್ಕಳಿಗೆ ಪಕ್ಷಿಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ, ಪಾರಿವಾಳ, ಗುಬ್ಬಿ, ಗಿಳಿ ಸೇರಿದಂತೆ ಸಾಮಾನ್ಯವಾಗಿ ಕಂಡು ಬರುವ ಪಕ್ಷಿಗಳ ಹಾಗೂ ಅರಣ್ಯ ಪ್ರದೇಶದಲ್ಲಿ ಕಾಣಸಿಗುವ ಅಪರೂಪದ ಪಕ್ಷಿಗಳು ಮತ್ತು ಅವುಗಳ ಆಹಾರ ಪದ್ದತಿ, ಹವಾಮಾನ ಆಧರಿಸಿ ವಲಸೆ ಹೋಗುವುದು ಮತ್ತಿತರ ಮಾಹಿತಿ ನೀಡಲಾಗುವುದು’ ಎಂದು ಹೇಳಿದರು.

ಚಿತ್ರಗಳ ಮೂಲಕ ವಿವಿಧ ಪಕ್ಷಿಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡಲಾಯಿತು. ಶಿಕ್ಷಕ ಪ್ರವೀಣ ಕುಮಾರ ಉಪಸ್ಥಿತರಿದ್ದರು.

ಕವಿತಾಳ ಸಮೀಪದ ಹೀರಾ ಗ್ರಾಮದ ಗ್ರಂಥಾಲಯದಲ್ಲಿ ಮಕ್ಕಳಿಗೆ ಪಕ್ಷಿಗಳ ಕುರಿತು ಮಾಹಿತಿ ನೀಡಲಾಯಿತು.
ಕವಿತಾಳ ಸಮೀಪದ ಹೀರಾ ಗ್ರಾಮದ ಗ್ರಂಥಾಲಯದಲ್ಲಿ ಮಕ್ಕಳಿಗೆ ಪಕ್ಷಿಗಳ ಕುರಿತು ಮಾಹಿತಿ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT