ಶುಕ್ರವಾರ, ಅಕ್ಟೋಬರ್ 23, 2020
24 °C
ರಾಂಪೂರ: 20 ಗುಂಟೆ ರುದ್ರಭೂಮಿ, ಹೂಳಿದ ಸ್ಥಳದಲ್ಲಿಯೇ ಹೆಣ ಹೂಳಬೇಕಾದ ಪರಿಸ್ಥಿತಿ

ರಾಯಚೂರು: ಮೃತಪಟ್ಟವರಿಗಿಲ್ಲ ಗೌರವದ ವಿದಾಯ!

ಬಾವಸಲಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ನಗರಸಭೆ ವ್ಯಾಪ್ತಿಯ ರಾಂಪೂರು‌ ಬಡಾವಣೆಯಲ್ಲಿ ಸತ್ತವರನ್ನು ಹೂಳಲು ಜಾಗದ ಕೊರತೆ ಎದುರಾಗಿದೆ. ನಿಗದಿತ ಪ್ರಮಾಣದಲ್ಲಿ ಸ್ಮಶಾನವಿಲ್ಲದ ಕಾರಣ ಅಂತ್ಯಸಂಸ್ಕಾರಕ್ಕೆ ಪರದಾಡುವ ಪರಿಸ್ಥಿತಿ ಇದೆ.

‘ರಾಂಪೂರದಲ್ಲಿ ಅಂದಾಜು 6 ಸಾವಿರ ಜನಸಂಖ್ಯೆ ಇದೆ. 800 ಕುಟುಂಬಗಳು ವಾಸವಾಗಿವೆ. ಶವ‌ ಸಂಸ್ಕಾರ ಮಾಡಲು‌ ಕೇವಲ 20 ಗುಂಟೆ ರುದ್ರಭೂಮಿ ಇದೆ. ಇದರಿಂದ ಹೂಳಿದ ಜಾಗದಲ್ಲಿ ಮತ್ತೊಂದು ಶವ ಹೂಳುವ ಪರಿಸ್ಥಿತಿ ಇದೆ’ ಎಂದು ನಿವಾಸಿಗಳು ಅಳಲು ತೋಡಿಕೊಂಡರು.

ಉಳ್ಳವರು ಖಾಸಗಿ ಜಮೀನುಗಳಲ್ಲಿ ಶವ ಸಂಸ್ಕಾರ ಮಾಡುತ್ತಾರೆ. ಬಡವರು ಹಾಗೂ ಪರಿಶಿಷ್ಟರಿಗೆ ಸ್ವಂತ ಜಮೀನಿಲ್ಲದ ಕಾರಣ ಶವ ಹೂಳಲು ಹೆಣಗಾಡಬೇಕು ಎಂದು ಗ್ರಾಮಸ್ಥರು ತಿಳಿಸಿದರು.

ಜಾಗದ ಕೊರತೆಯಿಂದ ಮೊದಲೇ ಇರುವ ಸಮಾಧಿಯನ್ನು ಮತ್ತೊಮ್ಮೆ ಅಗೆದು ಹೂಳಬೇಕಿದೆ. ಹೀಗೆ ಮಾಡುವಾಗ ಕೆಲವೊಮ್ಮೆ ಕೊಳೆತ ಶವಗಳು ಬರುತ್ತವೆ. ಅವುಗಳನ್ನು ಹೊರತೆಗೆದು, ಆ ಸ್ಥಳದಲ್ಲಿ ಶವ ಸಂಸ್ಕಾರ ಮಾಡುವ ಪರಿಸ್ಥಿತಿ ಇದೆ ಎನ್ನುತ್ತಾರೆ ಅವರು.

ಬಡಾವಣೆಗೆ ರುದ್ರಭೂಮಿ ಮಂಜೂರು ಮಾಡಬೇಕು ಎಂದು ಕಳೆದ ಮೂರು ವರ್ಷಗಳಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತ ಬಂದರೂ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ ಕೂಡಲೇ ಸ್ಮಶಾನಕ್ಕಾಗಿ 6 ಎಕರೆ ಜಮೀನು ಗುರುತಿಸಬೇಕು’ ಎಂದು ಗ್ರಾಮದ ಮುಖಂಡ ರವಿ ದಾದಸ್ ಒತ್ತಾಯಿಸಿದ್ದಾರೆ.

ಈ ಕುರಿತು ತಹಶಿಲ್ದಾರ್ ಹಂಪಣ್ಣ ಪ್ರತಿಕ್ರಿಯಿಸಿ,‘ನಗರ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ರುದ್ರಭೂಮಿಯ ಕೊರತೆ ಇರುವ ಕುರಿತು ದೂರುಗಳು ಬಂದಿವೆ. ಹಲವು ಕಡೆ ಖಾಸಗಿ ಮಾಲೀಕರು ಜಾಗ ನೀಡುತ್ತಿಲ್ಲ. ಇದರಿಂದ ವಿಳಂಬವಾಗುತ್ತಿದೆ. ಸರ್ಕಾರಿ ಜಮೀನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು