ಭಾನುವಾರ, ಮೇ 22, 2022
24 °C
ಪ್ರೊ.ಕೆ.ಎಸ್.ಭಗವಾನ್‍ ಮುಖಕ್ಕೆ ಮಸಿ ಬಳಿದಿದ್ದಕ್ಕೆ ಖಂಡನೆ

ಭಗವಾನ್‍ ಮುಖಕ್ಕೆ ಮಸಿ ಬಳಿದ ಮೀರಾ ರಾಘವೇಂದ್ರ ಬಂಧನಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾನ್ವಿ: ಬೆಂಗಳೂರಿನಲ್ಲಿ ಈಚೆಗೆ ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಅವರಿಗೆ ಅಪಮಾನ ಮಾಡಿದ ಘಟನೆ ಖಂಡಿಸಿ ಸ್ಥಳೀಯ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಶನಿವಾರ ಉಪ ತಹಶೀಲ್ದಾರ್ ಶ್ರೀನಿವಾಸರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.

ಬೆಂಗಳೂರಿನ ನ್ಯಾಯಾಲಯದ ಆವರಣದಲ್ಲಿ ವಕೀಲೆ ಮೀರಾ ರಾಘವೇಂದ್ರ ಅವರು ಪ್ರೊ.ಕೆ.ಎಸ್.ಭಗವಾನ್ ಅವರ ಮುಖಕ್ಕೆ ಮಸಿ ಬಳಿದು ಜೀವ ಬೆದರಿಕೆ ಹಾಕಿರುವ ಕೃತ್ಯ ಖಂಡನೀಯ. ಇದು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವುದು ಆತಂಕದ ಸಂಗತಿ. ವಕೀಲರಾಗಿ ಕಾನೂನು ಚೌಕಟ್ಟು ಉಲ್ಲಂಘಿಸಿ ನ್ಯಾಯಾಲಯದ ಗೌರವಕ್ಕೆ ಚ್ಯುತಿ ತಂದಿದ್ದಾರೆ. ಕಾರಣ ವಕೀಲೆ ಮೀರಾ ರಾಘವೇಂದ್ರ ಅವರನ್ನು ಬಾರ್ ಕೌನ್ಸಿಲ್ ಸದಸ್ಯತ್ವದಿಂದ ಉಚ್ಚಾಟಿಸಬೇಕು. ಅವರನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ರಾಜ್ಯಪಾಲರಿಗೆ ಬರೆದ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರಾದ ಲಕ್ಷ್ಮಣ ಜಾನೇಕಲ್, ಚಿನ್ನಪ್ಪ ಪಟ್ಟದಕಲ್, ಶಿವರಾಜ ಜಾನೇಕಲ್, ನರಸಪ್ಪ ಜೂಕೂರು, ಯಲ್ಲಪ್ಪ ಹಿರೇಬಾದರದಿನ್ನಿ, ಪ್ರವೀಣಕುಮಾರ, ಶಿವರಾಜ ಉಮಳಿಹೊಸೂರು, ದತ್ತಾತ್ರೇಯ, ನರಸಿಂಹ ರಾಜೋಳ್ಳಿ, ಶ್ರೀನಿವಾಸ ನಂದಿಹಾಳ, ಕೆ.ಎಂ.ಲಾರೆನ್ಸ್, ಬಸವರಾಜ ಜಾನೇಕಲ್, ಕಾಶೀನಾಥ ಕುರ್ಡಿ, ಗಣೇಶ ಸಂಗಾಪುರ, ಚೆನ್ನಬಸವ ಬಾಗಲವಾಡ ಹಾಗೂ ಹನುಮಂತ ಸೀಕಲ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.