ರಾಯಚೂರು: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ವಿಚಾರವಾಗಿ ಲಂಚದ ಬೇಡಿಕೆ ಇಟ್ಟು ಲೋಕಾಯುಕ್ತರ ಬಲೆಗೆ ಬಿದ್ದಿರುವ ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಬ್ಬೂರು ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ, ಕಾನ್ಸ್ಟೆಬಲ್ ರಮೇಶ ಅವರನ್ನು ಶನಿವಾರ ರಿಮ್ಸ್ ಬೋಧಕ ಆಸ್ಪತ್ರೆಗೆ ಕರೆ ತಂದು ವೈದ್ಯಕೀಯ ತಪಾಸಣೆಯ ನಡೆಸಲಾಯಿತು.

ಗಬ್ಬೂರು ನಿವಾಸಿ ಫಾರೂಕ್ ಅವರ ಮೇಲೆ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ ದಾಖಲು ಮಾಡದೇ ಇರಲು ₹10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಕಾನ್ಸ್ಟೆಬಲ್ ರಮೇಶ ಮೂಲಕ ₹3 ಲಕ್ಷಕ್ಕೆ ವ್ಯವಹಾರ ಕುದುರಿಸಿದ್ದರು. ಬೆಟ್ಟಿಂಗ್ ದಂದೆಯಲ್ಲಿ ಭಾಗಿಯಾಗದಿದ್ದರೂ ಪ್ರಕರಣ ದಾಖಲು ಮಾಡುತ್ತಾರೆ ಎನ್ನುವ ಆತಂಕ ಹಾಗೂ ಪೊಲೀಸರ ಕಿರಿಕಿರಿಯಿಂದಾಗಿ ಫಾರೂಕ್ ಮೊದಲಿಗೆ ₹70 ಸಾವಿರ ನಗದು ಹಾಗೂ ₹30 ಸಾವಿರ ಪೋನ್ ಪೇ ಮುಖಾಂತರ ಹಣ ಕೊಟ್ಟಿದ್ದರು. ನಂತರ ಲೋಕಾಯುಕ್ತರಿಗೆ ದೂರು ನೀಡಿದ್ದರು

ದೂರು ಸ್ವೀಕರಿಸಿದ ಲೋಕಾಯುಕ್ತರ ಅಧಿಕಾರಿಗಳು ಕಾನ್ಸ್ಟೆಬಲ್ ರಮೇಶ ₹50 ಸಾವಿರ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.