ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಮೂಲಿ ವಸೂಲಿ ವಿರುದ್ಧ ಲಾರಿ ಮಾಲೀಕರಿಂದ ಪ್ರತಿಭಟನೆ

Last Updated 10 ಆಗಸ್ಟ್ 2021, 15:27 IST
ಅಕ್ಷರ ಗಾತ್ರ

ರಾಯಚೂರು. ಲೋಡಿಂಗ್ ಮತ್ತು ಅನ್ ಲೋಡಿಂಗ್ ಮಾಮೂಲಿ ಹೆಸರಿನಲ್ಲಿ ಲಾರಿ ಮಾಲೀಕರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಒಕ್ಕೂಟದ ಸದಸ್ಯರು ನಗರದ ಟಿಪ್ಪುಸುಲ್ತಾನ್ ಉದ್ಯಾನವನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ವರ್ತಕರ ವಿರುದ್ಧ ಘೋಷಣೆಗಳನ್ನು ಕೂಗಿದ ಬಳಿಕ ಜಿಲ್ಲಾಡಳಿತ ಅಧಿಕಾರಿಗೆ ಮನವಿ ಸಲ್ಲಿಸಿದರು.

ವರ್ತಕರು ಹಾಗೂ ಕೈಗಾರಿಕೆಗಳು ಸರಕನ್ನು ಒಂದು ಕಡೆಯಿಂದ ಇನ್ನೊಂದು ಕಡೆ ಸಾಗಾಣಿಕೆ ಮಾಡಲು ಲಾರಿಗಳನ್ನು ಬಾಡಿಗೆ ಪಡೆದುಕೊಳ್ಳುತ್ತಿದ್ದಾರೆ. ಆದರೆ ಅವರ ಸರಕನ್ನು ಲಾರಿಗಳಿಗೆ ಲೋಡ್ ಅಥವಾ ಆನ್ ಲೋಡ್ ಮಾಡಲು ಕೊಡಬೇಕಾದ ಹಮಾಲಿ ವೆಚ್ಚವನ್ನು ತಾವೇ ಪಾವತಿಸುತ್ತಿಲ್ಲ. ಲೋಡಿಂಗ್ ಆನ್ ಲೋಡಿಂಗ್ ಮಾಮೂಲಿ ಎಂದು ಲಾರಿಯವರಿಂದ ವಸೂಲಿ ಮಾಡಿ ಅನ್ಯಾಯ ಮಾಡುತ್ತಿರುವುದು ಕಾನೂನು ಬಾಹಿರ ವಾಗಿದೆ ಎಂದು ದೂರಿದರು.

ಲಾರಿ ಮಾಲೀಕರು ಒಪ್ಪದಿದ್ದಾಗ ವರ್ತಕರು ಲಾರಿಗಳನ್ನು ಲೋಡ್ ಅಥವಾ ಆನ್‌ಲೋಡ್ ಮಾಡದೆ ಹಾಗೆ ನಿಲ್ಲಿಸಿ ಲಾರಿ ಚಾಲಕರಿಗೆ ಹಾಗೂ ಮಾಲೀಕರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದರು.

ಲಾರಿ ಮಾಲೀಕರಿಗೆ ಆಗುತ್ತಿರುವ ಅನ್ಯಾಯ ವಿರುದ್ಧ ದೇಶದಾದ್ಯಂತ ಎಲ್ಲಾ ಲಾರಿ ಮಾಲೀಕರ ಸಂಘದಿಂದ ಆಗಸ್ಟ್‌ 16 ರಿಂದ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಒಕ್ಕೂಟದ ಅದ್ಯಕ್ಷ ಸೈಯದ್ ಹಸನ್, ಉಪಾದ್ಯಕ್ಷ ಅಜೀಮ್ ಪಾಷಾ, ಕಾರ್ಯಾದ್ಯಕ್ಷ ಅಹಮ್ಮದ್ ರಾಯಿಸ್, ಕಾರ್ಯದರ್ಶಿ ತೋಫೀಕ್ ಹುಸೇನ್, ಮಹಮ್ಮದ್ ಕುತುಬುದ್ದಿನ್, ಸೈಯದ್ ಶರೀಫ್, ಸೈಯದ್ ಯೂನೂಸ್ ಸಲೀಮ್, ಮಹಮ್ಮದ್ ಮೋಹಿನ್, ಬ್ರಿಜೆಲ್ ಪಾಟೀಲ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT