ಮಲ್ಲಯ್ಯ ದೇವರ ರಥೋತ್ಸವ ಫೆ.5ಕ್ಕೆ

ಮಸ್ಕಿ: ‘ಫೆಬ್ರುವರಿ 5 ರಂದು ಪಟ್ಟಣದ ಮಲ್ಲಯ್ಯ ದೇವರ ರಥೋತ್ಸವ ನಡೆಯಲಿದೆ’ ಎಂದು ಮಲ್ಲಿಕಾರ್ಜುನ ದೇವಸ್ಥಾನ ಸಮಿತಿ ಪ್ರಕಟಣೆ ತಿಳಿಸಿದೆ.
ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ನೇತೃತ್ವದಲ್ಲಿ ಅಂದು ಸಂಜೆ 5ಕ್ಕೆ ರಥೋತ್ಸವಕ್ಕೆ ಚಾಲನೆ ನೀಡಲಾಗುವುದು. ರಥೋತ್ಸವದ ಅಂಗವಾಗಿ ಫೆ. 1 ರಂದು ಧ್ವಜಾರೋಹಣ, 2 ಹಾಗೂ 3 ರಂದು ಪಲ್ಲಕ್ಕಿ ಸೇವೆ, 4 ರಂದು ರಥದ ಕಳಸದ ಮೆರವಣಿಗೆ ನಡೆಯಲಿದೆ. 5 ರಂದು ಬೆಳಿಗ್ಗೆ ರಥದ ಕಳಸಾರೋಹಣ ಹಾಗೂ ಸಂಜೆ 5ಕ್ಕೆ ರಥೋತ್ಸವ ಜರುಗಲಿದೆ.
ಮಸ್ಕಿ ಸೇರಿ ರಾಯಚೂರು ಹಾಗೂ ನೆರೆ ಜಿಲ್ಲೆಗಳ ಭಕ್ತರು ಭಾಗಿಯಾಗಲಿದ್ದಾರೆ. 120 ವರ್ಷಗಳಷ್ಟು ಹಳೆಯದಾದ ರಥವನ್ನು ದೈವದಕಟ್ಟೆಯ ಪಾದಗಟ್ಟೆವರೆಗೆ ಎಳೆದು ಪುನಃ ದೇವಸ್ಥಾನಕ್ಕೆ ತರಲಿದ್ದಾರೆ.
6 ರಂದು ಪಲ್ಲಕ್ಕಿ ಸೇವೆ ಹಾಗೂ 7 ರಂದು ಕಡುಬಿನ ಕಾಳಗದ ಮೂಲಕ ರಥೋತ್ಸವದ ಕಾರ್ಯಕ್ರಮಗಳು ಪೂರ್ಣಗೊಳ್ಳಲಿವೆ. ರಥೋತ್ಸವದ ಹಿನ್ನೆಲೆಯಲ್ಲಿ ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು ಎಂದು ಸಬ್ ಇನ್‌ಸ್ಪೆಕ್ಟರ್ ಸಿದ್ದರಾಮ ಬಿದರಾಣಿ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.