ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿ ಉಪ ಚುನಾವಣೆ: ಆರು ತಿಂಗಳಿನಿಂದ ಬಾಡಿಗೆ ಬಾಕಿ, ಪರದಾಟ

ಬಿಡುಗಡೆಯಾಗದ ಉಪ ಚುನಾವಣೆ ಕೆಲಸ-ಕಾರ್ಯಗಳ ನಿರ್ವಹಣೆಯ ವೆಚ್ಚ
Last Updated 7 ಅಕ್ಟೋಬರ್ 2021, 11:14 IST
ಅಕ್ಷರ ಗಾತ್ರ

ಮಸ್ಕಿ: ಉಪ ಚುನಾವಣೆ ಮುಗಿದು ಆರು ತಿಂಗಳು ಕಳೆದರೂ ಚುನಾವಣೆ ಸಂದರ್ಭದಲ್ಲಿ ಬಾಡಿಗೆ ನೀಡಿದ ವಾಹನ ಮಾಲೀಕರು, ವಿಡಿಯೊ ಮತ್ತು ಪೋಟೋಗ್ರಾಪರ್, ಶ್ಯಾಮಿಯಾನ್ ಅಂಗಡಿಯವರು ತಮಗೆ ಬರಬೇಕಾದ ಬಾಕಿ ಹಣಕ್ಕಾಗಿ ನಿತ್ಯ ತಹಶೀಲ್ದಾರ್ ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಅಲೆದಾಡುತ್ತಿದ್ದಾರೆ.

ಪ್ರತಾಪಗೌಡ ಪಾಟೀಲ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಮಸ್ಕಿ ಕ್ಷೇತ್ರದ ಉಪ ಚುನಾವಣೆ ಏಪ್ರೀಲ್ 17 ರಂದು ನಡೆದಿತ್ತು. ಚುನಾವಣೆಗಾಗಿ ಕಂದಾಯ ಇಲಾಖೆ ಒಂದರಲ್ಲಿಯೇ ₹ 1.32 ಕೋಟಿ ವೆಚ್ಚವಾಗಿದೆ.

ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಗೆ ಸಾರಿಗೆ ಸೌಲಭ್ಯ, ಕುಡಿವ ನೀರು, ಊಟೋಪಚಾರ ಸೇರಿ ಹಲವು ಬಗೆಯ ಕೆಲಸ-ಕಾರ್ಯಗಳ ನಿರ್ವಹಣೆಗೆ ಖರ್ಚು-ವೆಚ್ಚ ಭರಿಸಲು ಜಿಲ್ಲಾಡಳಿತ ₹ 76 ಲಕ್ಷ ಹಣವನ್ನು ಮುಂಗಡವಾಗಿ ಬಿಡುಗಡೆ ಮಾಡಿತ್ತು. ಲಭ್ಯ ಈ ಹಣದಲ್ಲಿಯೇ ಹಲವು ಕೆಲಸಗಳನ್ನು ತಾಲೂಕು ಆಡಳಿತ ನಿರ್ವಹಿಸಿದೆ. ಆದರೆ ಈ ಇದನ್ನು ಮೀರಿಯೂ ₹ 56 ಲಕ್ಷ ಹೆಚ್ಚಿಗೆ ಖರ್ಚಾಗಿದೆ. ಹೆಚ್ಚಿಗೆ ಖರ್ಚಾದ ಬಾಕಿ ಹಣ ಮಾತ್ರ ಆರು ತಿಂಗಳಾದರೂ ಬಿಡುಗಡೆಯಾಗಿಲ್ಲ.

₹ 56 ಲಕ್ಷ ಬಾಕಿ: ವಿಡಿಯೋ ಗ್ರಾಫರ್ಸ್, ಸಿ.ಸಿ ಟಿವಿ ಕ್ಯಾಮೆರಾ, ಶಾಮೀಯಾನ ಸಪ್ಲಾಯರ್ಸ್, ಪೆಟ್ರೋಲ್ ಹಾಗೂ ವಾಹನಗಳ ಬಾಡಿಗೆ ಸೇರಿ ಇನ್ನು ಹಲವು ಬಗೆಯ ಖರ್ಚುಗಳಿಗೆ ಸಂಬಂಧಿಸಿದ ಬಾಕಿ ಹಣ ಇದುವರೆಗೂ ನೀಡಿಲ್ಲ. ಪೆಟ್ರೋಲ್, ವಾಹನದ ಬಾಡಿಗೆ ಮೊತ್ತವೆ₹ 22 ಲಕ್ಷ ಬಾಕಿ ಉಳಿದಿದೆ. ಎಲ್ಲ ಬಗೆಯಿಂದಲೂ ₹56 ಲಕ್ಷ ರೂ. ಬಾಕಿ ಇದ್ದು, ಈ ಹಣವನ್ನು ಬಿಡುಗಡೆಗಾಗಿ ಜಿಲ್ಲಾಧಿಕಾರಿ ಅವರಿಎ ಪ್ರಸ್ತಾವಸಲ್ಲಿಸಲಾಗಿದೆ ಎಂದು ತಹಶೀಲ್ದಾರ್‌ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಸ್ತಾವ ಸಲ್ಲಿಕೆಗೆ ವಿಳಂಬ: ಉಪ ಚುನಾವಣೆ ಅವಧಿಯಲ್ಲಿ ಮಾಡಿದ ಖರ್ಚು-ವೆಚ್ಚದ ನಿರ್ವಹಣೆಯೇ ಗೊಂದಲವಾಗಿದೆ. ಸಮರ್ಪಕವಾಗಿ ದಾಖಲೆ ಇಲ್ಲ. ನಿಗಧಿತ ಅವಧಿಯಲ್ಲಿ ಬಳಕೆಯಾದ ಹಣದ ಕುರಿತು ಬಳಕೆ ಪ್ರಮಾಣ ಪತ್ರವನ್ನು ಜಿಲ್ಲಾಡಳಿತಕ್ಕೆ ನೀಡಿ, ಹೆಚ್ಚುವರಿ ಬೇಡಿಕೆ ಇರುವ ಹಣ ಬಿಡುಗಡೆಗೆ ಪ್ರಸ್ತಾವ ಸಲ್ಲಿಕೆಗೆ ವಿಳಂಬ ಮಾಡಿದ್ದರಿಂದ ಹಣ ಬಿಡುಗಡೆಯಾಗಿಲ್ಲ. ತಹಶೀಲ್ ಕಚೇರಿಯಲ್ಲಿನ ಸಿಬ್ಬಂದಿಯ ವಿಳಂಬ ನೀತಿಯಿಂದಾಗಿ ಈ ಸಮಸ್ಯೆ ಉಂಟಾಗಿದೆ ಎನ್ನಲಾಗುತ್ತಿದೆ.

ಚುನಾವಣೆಯಲ್ಲಿ ಕೆಲಸ ಮಾಡಿದ್ದಕ್ಕೆ ಸಂಬಂಧಿಸಿದ ಬಾಕಿ ಹಣಕ್ಕಾಗಿ ಈಗಾಗಲೇ ಹಲವು ಬಾರಿ ತಹಶೀಲ್ದಾರ್‌ ಕಚೇರಿ ಅಧಿಕಾರಿಗಳಲ್ಲಿ ಮನವಿ ಮಾಡಲಾಗಿದೆ. ಇನ್ನು ಎರಡು ದಿನದಲ್ಲಿ ಹಣ ಬಿಡುಗಡೆ ಮಾಡದೇ ಇದ್ದರೆ ಹೋರಾಟಕ್ಕೆ ಇಳಿಯುತ್ತವೆ.
- ಆಂಜನೇಯ, ಕಾರ್ಯದರ್ಶಿ, ಪೋಟೋ ಗ್ರಾಫರ್ ಅಸೋಶಿಯೆಷನ್

ಉಪ ಚುನಾವಣೆಯಲ್ಲಿ ಆದ ಖರ್ಚು-ವೆಚ್ಚಕ್ಕೆ ಸಂಬಂಧಿಸಿದಂತೆ ಇನ್ನು ಹಲವರಿಗೆ ಹಣ ನೀಡುವುದು ಬಾಕಿ ಇರುವ ಬಗ್ಗೆ ನನ್ನ ಗಮನಕ್ಕೂ ಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರ ಜತೆ ಮಾತನಾಡಿ, ಬಾಕಿ ಹಣ ಬಿಡುಗಡೆ ಮಾಡಲಾಗುವುದು.
–ಕವಿತಾ ಆರ್.ತಹಶೀಲ್ದಾರ್, ಮಸ್ಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT