ಮಲ್ಲದಗುಡ್ಡ (ಕವಿತಾಳ): ‘ಬಿಜೆಪಿ ದುರಾಡಳಿತದಿಂದ ರಸಗೊಬ್ಬರ ಬೆಲೆ ಮತ್ತು ನಿತ್ಯ ಬಳಕೆ ಸಾಮಗ್ರಿಗಳ ಬೆಲೆ ಗಗನಕ್ಕೇರಿದ್ದು ಜನ ಸಾಮಾನ್ಯರು ಜೀವನ ನಡೆಸುವುದು ದುಸ್ತರವಾಗಿದೆ. ಬೆಲೆ ಏರಿಕೆಯೇ ಬಿಜೆಪಿ ಸರ್ಕಾರದ ಸಾಧನೆ’ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದರು.

ಮಲ್ಲದಗುಡ್ಡ ಗ್ರಾಮದಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ರಾಜ್ಯ ಮತ್ತು ಕೇಂದ್ರದಲ್ಲಿರುವುದು ಬಡವರ ಪರ ಸರ್ಕಾರವಲ್ಲಿ ಶ್ರೀಮಂತರ ಪರ ಸರ್ಕಾರ, ಸಮ್ಮಿಶ್ರ ಸರ್ಕಾರ ಜಾರಿಗೆ ತಂದಿದ್ದ ಅನೇಕ ಯೋಜನೆಗಳನ್ನು ರದ್ದುಗೊಳಿಸುವ ಮೂಲಕ ಬಿಜೆಪಿ ಸರ್ಕಾರ ರಾಜ್ಯದ ಜನತೆಗೆ ದ್ರೋಹ ಎಸಗುತ್ತಿದೆ’ ಎಂದರು.

ಶಾಸಕರಾದ ಅನಿಲ್ ಚಿಕ್ಕಮಾದ, ಬಸನಗೌಡ ದದ್ದಲ ಮತ್ತು ಮುಖಂಡ ಕೆ.ಕರಿಯಪ್ಪ ಮಾತನಾಡಿದರು.

ಮುಖಂಡರಾದ ಕೇಶವರಾವ್, ಅಯ್ಯಪ್ಪ ವಕೀಲ, ಪಿ.ವಾಸು, ಗಿರಿಜಯ್ಯಸ್ವಾಮಿ, ಮಂಜುನಾಥ, ಮಲ್ಲಯ್ಯ ಗೋರ್ಕಲ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.