ಸೋಮವಾರ, ಜೂನ್ 27, 2022
27 °C

ಮೋದಿ ಗಡ್ಡಬಿಟ್ಟರೆ ಟ್ಯಾಗೋರ್ ಆಗೋದಿಲ್ಲ: ಖರ್ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಸ್ಕಿ (ರಾಯಚೂರು): 'ಪ್ರಧಾನಿ ನರೇಂದ್ರ ಮೋದಿ ಗಡ್ಡಬಿಟ್ಟರೆ ರವೀಂದ್ರನಾಥ ಟ್ಯಾಗೋರ್ ಆಗೋದಿಲ್ಲ.‌ ಪಶ್ಚಿಮ ಬಂಗಾಳ ಚುನಾವಣೆ ಗಮನದಲ್ಲಿಟ್ಟುಕೊಂಡು ಮಾಡಿರುವ ನಕಲು ಇದಾಗಿದೆ' ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ‌ ಮಲ್ಲಿಕಾರ್ಜುನ ‌ಖರ್ಗೆ ಹೇಳಿದರು.

ಮಸ್ಕಿಯಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್ ಪರ ಬಹಿರಂಗ ಸಭೆಯಲ್ಲಿ ಮಾತನಾಡಿದರು.

'ಪಶ್ಚಿಮ ‌ಬಂಗಾಳಕ್ಕೆ ಹೋಗಿದ್ದ ಪ್ರಧಾನಿ ಪಕ್ಷದ ನೀತಿ‌ಗಳನ್ನು ಹೇಳುವ ಬದಲಾಗಿ, ಮಮತಾ‌ ಬ್ಯಾನರ್ಜಿ‌ ಅವರನ್ನು ವ್ಯಂಗ್ಯ ಮಾಡಿದ್ದಾರೆ. ಪ್ರಧಾನಿ ಜೋಕರ್ ರೀತಿ‌ ವರ್ತನೆ ತೋರಿಸಿದ್ದಾರೆ' ಎಂದು ಹರಿಹಾಯ್ದರು.

'ದೇಶದಲ್ಲಿ ಕೋವಿಡ್‌ನಿಂದ ಜನರು ಸಾಯುತ್ತಿದ್ದಾರೆ.‌ ಆದರೆ ಪ್ರಧಾನಿ ಬೇರೆ ಬೇರೆ ರಾಜ್ಯಗಳಿಗೆ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ' ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು