ಭಾನುವಾರ, ಮೇ 9, 2021
27 °C

ಗಮನ ಸೆಳೆದ ‘ಸಖಿ’ ಮತಗಟ್ಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುರ್ವಿಹಾಳ: ಶನಿವಾರ ನಡೆದ ಮಸ್ಕಿ ವಿಧಾನಸಭೆ ಉಪಚುನಾವಣೆಯಲ್ಲಿ ಮಹಿಳಾ ಮತದಾರರ ಗಮನ ಸೆಳೆಯಲು ಗುಲಾಬಿ ಬಣ್ಣದ ಅಲಂಕಾರಿಕಾ ವಸ್ತುಗಳಿಂದ ನಿರ್ಮಿಸಿರುವ ‘ಸಖಿ’ ಮತಗಟ್ಟೆಯು ತುರ್ವಿಹಾಳ ಪಟ್ಟಣದಲ್ಲಿಯೇ ಆಕರ್ಷೀಣಿಯ ಕೇಂದ್ರವಾಗಿತ್ತು.

ಮಸ್ಕಿ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಎರಡು ಮತಗಟ್ಟೆಗಳನ್ನು ಸಖಿ ಮತಗಟ್ಟೆಗಳೆಂದು ಗುರುತಿಸಿ ವಿಶೇಷವಾದ ದೀಪಾಲಂಕಾರ, ಬಲೂನು ಮತ್ತು ಬಣ್ಣದ ಹಾಳೆಗಳಿಂದ ಝಗಮಗಿಸುವಂತ ದೃಶ್ಯಾವಳಿಗಳನ್ನು ಅಲಂಕರಿಸಿದನ್ನು ನೋಡಿದ ಮಹಿಳೆಯರು ಮತದಾನದಲ್ಲಿ ಆಸಕ್ತಿ ಮೂಡುವಂತೆ ಮಾಡಿತು ಎಂದು ನಾಗರಾಜ ಮತಗಟ್ಟೆ ಅಧಿಕಾರಿ ಹೇಳಿದರು.

ತುರ್ವಿಹಾಳ ಪಟ್ಟಣ ಪಂಚಾಯಿತಿಯ ಕಟ್ಟಡದ 213-ಮತಗಟ್ಟೆಯ ಕೇಂದ್ರವು ಒಂದಾಗಿದ್ದು, ಕೇಂದ್ರದ ದ್ವಾರದಲ್ಲಿ ಮತದಾರರನ್ನು ಸ್ವಾಗತ ಕೊರುವ ಭಾವಚಿತ್ರಗಳು, ನಂತರ ಆರೋಗ್ಯಸಿಬ್ಬಂದಿಯಿಂದ ಸ್ಯಾನಿಟೈಜರ್, ಮಾಸ್ಕ್ ವಿತರಣೆ, ತಾಪಮಾನ ತಪಾಸಣೆ ನಡೆಯಿತು.

ಮತದಾರರು ವಿಶ್ರಾಂತಿ ಪ್ರದೇಶದಲ್ಲಿ ಕುಳಿತು ಸಾಲಾಗಿ ಮತಗಟ್ಟೆಗಳಲ್ಲಿ ಮತದಾನ ಮಾಡಿದರು. ಈ ಮತದಾನದ ಪ್ರಕ್ರಿಯೆಯನ್ನು ಮಹಿಳಾ ಸಿಬ್ಬಂದಿಯೇ ನಡೆಸುವುದು ವಿಶೇಷವಾಗಿತ್ತು ಎಂದು ಮತದಾರರಾದ ಅನ್ನಪೂರ್ಣ ಬಡಿಗೇರ, ವಿಜಯಲಕ್ಷ್ಮೀ ಸಜ್ಜನ ಹೇಳಿದರು.

ಈ ಸಂದರ್ಭದಲ್ಲಿ ಮಹಾದೇವಪ್ಪ ನರಿ, ಡಾ.ಮಂಜುನಾಥ , ಚನ್ನಬಸವ,ರಾಜೇಶ,ರೇಣುಕಾ,ತಿಮ್ಮಪ್ಪ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.