ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಯಲ್ಲಿ ರಾಜಕೀಯ ಸಲ್ಲದು: ಡಾ. ಶಿವರಾಜ ಪಾಟೀಲ

Last Updated 11 ಸೆಪ್ಟೆಂಬರ್ 2021, 13:56 IST
ಅಕ್ಷರ ಗಾತ್ರ

ರಾಯಚೂರು: ಚುನಾಯಿತ ಜನಪ್ರತಿನಿಧಿಗಳು ಜನರ ಸೇವಕರು. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಬಾರದು. ನಗರದ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಅನುದಾನ ತಂದಿದ್ದು ವಾಪಸ್ ಹೋಗದಂತೆ ಕೆಲಸ ಮಾಡಲಾಗುವುದು ಎಂದು ನಗರ ಶಾಸಕ ಡಾ.ಶಿವರಾಜ ಪಾಟೀಲ ತಿಳಿಸಿದರು.

ನಗರದ ವಾರ್ಡ್ ನಂಬರ್ 7ರ ಅಂದ್ರೂನ್ ಕಿಲ್ಲಾ ಬಡಾವಣೆಯ ಜಾಮಿಯಾ ಮಸೀದಿಯ ₹ 10ಲಕ್ಷ ವೆಚ್ಚದ ಹೈಟೆಕ್ ಶೌಚಾಲಯ ಉದ್ಘಾಟಿಸಿ ಮಾತನಾಡಿದರು.

ಶಾಸಕರ ಅನುದಾನದಡಿ ಈ ವಾರ್ಡ್‌ ಗೆ ₹86 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿತ್ತು. ಈ ಭಾಗದ ನಗರಸಭೆ ಸದಸ್ಯರು ಸಹಕಾರ ನೀಡದ ಕಾರಣ ಬೇರೆ ವಾರ್ಡ್‌ಗೆ ಕಾಮಗಾರಿ ವರ್ಗಾಯಿಸಲಾಗಿದೆ. ಮಸೀದಿಯ ಮುಂಭಾಗದ ರಸ್ತೆಯ ಅಭಿವೃದ್ಧಿಗೆ ₹ 1 ಕೋಟಿ ಬಿಡುಗಡೆ ಮಾಡಲಾಗುವುದು ಸಂಬಂಧಿಸಿದವರು ಜಬಾವ್ದಾರಿ ವಹಿಸಿಕೊಳ್ಳಬೇಕು ಎಂದರು.

ಒಂದೇ ಜಾತಿ, ಧರ್ಮಕ್ಕೆ ಸೀಮಿತವಾದ ನಾಯಕನಲ್ಲ. ನನಗೆ ಮತ ಹಾಕಿದ, ಹಾಕದ ಜನರ ಬಡಾವಣೆಯ ಅಭಿವೃದ್ಧಿ ನನ್ನ ಕರ್ತವ್ಯ. ನೂರಾರು ಜನರು ನನ್ನ ಕಚೇರಿಗೆ ಭೇಟಿ ನೀಡುತ್ತಾರೆ. ಎಲ್ಲರ ಸಮಸ್ಯೆ ಆಲಿಸಿ ಪರಿಹಾರ ಸೂಚಿಸುತ್ತೇನೆಎಂದು ಹೇಳಿದರು.

ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸೈಯದ್ ಮುಕ್ತಿಯಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೆ. ಗೋಪಾಲರೆಡ್ಡಿ, ಮಸೀದಿಯ ಇಮಾಮ್ ರಫೀಕ್ ಸಾಬ್, ಗುತ್ತೇದಾರದ ಮುಜಿಬುದ್ದೀನ್, ಅಹಮದ್ ಬೇಗ್, ಜಾವಿದ್ ರಫೀಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT