ಮಸ್ಕಿ: ಜಮ್ಮು-ಕಾಶ್ಮೀರದ ಆನಂತ ಜಿಲ್ಲೆಯ ಪಹಲ್ಗಾಮ್ನಲ್ಲಿ26 ಜನರ ಪ್ರಾಣ ಬಲಿ ತೆಗೆದು ಕೊಂಡಿರುವ ಆತಂಕವಾದಿಗಳ ಕೃತ್ಯ ಖಂಡಿಸಿ ಪಟ್ಟಣದ ಮುಸ್ಲಿಮರು ಪ೦ಚ್ ಕಮೀಟಿ ನೇತೃತ್ವದಲ್ಲಿ ಶನಿವಾರ ಮೌನ ಮೆರವಣಿಗೆ ನಡೆಸಿದರು.

ಪಟ್ಟಣದ ಜಾಮೀಯಾ ಮಸೀದಿ ಬಳಿ ಜಮಾಯಿಸಿದ ನೂರಾರು ಮುಸ್ಲಿಮರು ಮೇಣದ ಬತ್ತಿಗಳನ್ನುಹಿಡಿದು ಪ್ರಮುಖ ರಸ್ತೆಗಳ ಮೂಲಕ ಸಾಗಿ ಹಳೆಯ ಬಸ್ ನಿಲ್ದಾಣ ಬಳಿಯ ಡಾ.ಅಂಬೇಡ್ಕರ್ ಪ್ರತಿಮೆ ಸ್ಥಳಕ್ಕೆ ಆಗಮಿಸಿದರು.

ಮುಖ೦ಡರಾದ ಅಬ್ದುಲ್ ಗನಿ, ಮಸೂದ್ ಪಾಶಾ, ಜಿಲಾನಿ ಖಾಜಿ ಮಾತನಾಡಿ, ಪಾಕಿಸ್ಥಾನದಿಂದ ಬ೦ದ ಉಗ್ರರ ತಂಡ ದೇಶ, ವಿದೇಶದ 26 ಜನರ ಮೇಲೆ ಗುಂಡಿನ ದಾಳಿ ನಡೆಸಿ ಪೈಶಾಚಿಕ ಕೃತ್ಯ ನಡೆಸಿರುವುದಕ್ಕೆ ದೇಶದ ಜನರು ಒಕ್ಕೂರಿಲಿನಿಂದ ಖಂಡಿಸುತ್ತಿದ್ದಾರೆ ಎಂದರು.

ಪಹಲ್ಗಾಮ್ ಘಟನೆಯಲ್ಲಿ ಅನೇಕ ಅಮಾಯಕ ಜನರು ಪ್ರಾಣ ಕಳೆದು ಕೊಂಡಿದ್ದಾರೆ ಉಗ್ರವಾದಿಗಳನ್ನು ಪತ್ತೆ ಹಚ್ಚಿ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಉಗ್ರರದ ದಾಳಿಯಲ್ಲಿ ಬಲಿಯಾದವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು. ಪಂಚ್ ಕಮಿಟಿ ಅಧ್ಯಕ್ಷ ಅಬ್ದುಲ್ ಅಜೀಜ್, ಪುರಸಭೆ ಸದಸ್ಯ ಶಬ್ಬಿರ್ ಚೌದ್ರಿ, ಮುಖಂಡರಾದ ಅಜೀರ್ ಹಲಪುಡಿ, ಅಜ್ಜುಮೆಕ್ಯಾನಿಕ, ಚಾಂದ್ ಶೇಡಮಿ, ರಾಜಾ ನಧಾಫ್, ಹುಸೇನ್, ಖಲೀಲ್ ರಿಯಾಜ್ ಖಾಜಿ, ಖದೀರ ಚೌದ್ರಿ, ಹನೀಸ್ ಖಾಜಿ, ರಜಾಕ್ ಕರೋಡಗಿರಿ, ನೂರ್ ಮೌಲಾನಾ, ಆದಂ ಹಾಜಿ, ನಬಿಸಾಬ್ ಶಫಿ ಶೇರು, ಬಾಹರ ಅಲಿ, ಖಾಜಾ ಶಿಕಾರಿ, ನಿಸಾರ ಅಹ್ಮದ್, ಇಮಾಮ್ ಕಾತರಕಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.