ಭಾನುವಾರ, ಜೂನ್ 26, 2022
28 °C

ರಾಯಚೂರು: ಸಾರಜನಕದಿಂದ ಆಮ್ಲಜನಕ ಪರಿವರ್ತಿಸುವ ಘಟಕ ಸ್ಥಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ನಗರದ ರಾಯಕೇಮ್‌ ಮೆಡಿಕೇರ್‌ ಲಿಮಿಟೆಡ್‌ ಕಂಪೆನಿಯಿಂದ ನವೋದಯ ಆಸ್ಪತ್ರೆ ಆವರಣದಲ್ಲಿ ‘ಸಾರಜನಕವನ್ನು ಆಮ್ಲಜನಕ’ಕ್ಕೆ ಪರಿವರ್ತಿಸುವ ಘಟಕ ಸ್ಥಾಪಿಸಿ ಆಸ್ಪತ್ರೆಗೆ ಹಸ್ತಾಂತರಿಸಿದೆ.

ದಿನಕ್ಕೆ ಒಂದು ಟನ್‌ ಆಮ್ಲಜನಕ ದೊರೆಯಲಿದ್ದು, ಇದರಿಂದ 12 ಜಂಬೋ ಸಿಲಿಂಡರ್‌ಗಳನ್ನು ಭರ್ತಿ ಮಾಡಬಹುದಾಗಿದೆ. ರಾಯಚೂರು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಅವರು ಈಚೆಗೆ ಘಟಕವನ್ನು ಉದ್ಘಾಟಿಸಿದರು. ರಾಯಕೇಮ್‌ ಮ್ಯಾನೇಜರ್‌ ಪ್ರಹ್ಲಾದರಾವ್‌ ಕೆ., ಪರಿಸರ ಅಧಿಕಾರಿ ಶ್ರೀಧರ್‌, ನವೋದಯ ಆಸ್ಪತ್ರೆಯ ಸಿಇಒ ಡಾ.ಅಮೃತರೆಡ್ಡಿ ಇದ್ದರು.

ಐಸಿಇ ಸಮೂಹ ಕಂಪೆನಿಯ ಪ್ರಾದೇಶಿಕ ನಿರ್ದೇಶಕ ಸುರೇಶ, ಅಂಜನಾ, ಮಸ್ಸೊಮಿ ಅವರು ಆನ್‌ಲೈನ್‌ ಮೂಲಕ ಕಾರ್ಯಕ್ರಮದಲ್ಲಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು