ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದಯಾತ್ರಿಗಳ ಸಂಖ್ಯೆ ಇಳಿಮುಖ

Last Updated 14 ಮಾರ್ಚ್ 2020, 10:40 IST
ಅಕ್ಷರ ಗಾತ್ರ

ರಾಯಚೂರು: ಸುಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕಾಗಿ ವಿವಿಧ ಜಿಲ್ಲೆಗಳಿಂದ ರಾಯಚೂರಿನ ಮೂಲಕ ಪಾದಯಾತ್ರೆ ತೆರಳುತ್ತಿದ್ದ ಭಕ್ತರ ಸಂಖ್ಯೆ ಕೋವಿಡ್‌ ಭೀತಿಯಿಂದ ಈ ವರ್ಷ ಗಣನೀಯ ಕುಸಿತವಾಗಿದೆ.

ಪಾದಯಾತ್ರಿಗಳಿಗೆ ಉಚಿತ ಅನ್ನಸಂತರ್ಪಣೆ, ನೀರು, ಮಜ್ಜಿಗೆ ಹಾಗೂ ಹಣ್ಣು ವಿತರಿಸುವುದಕ್ಕಾಗಿ ಜಿಲ್ಲೆಯ ಹಲವು ಕಡೆಗಳಲ್ಲಿ ದಾನಿಗಳು ತೆರೆದ ಮಳಿಗೆಗಳು ಖಾಲಿಖಾಲಿ ಉಳಿದಿವೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ ಹಾಗೂ ಕಲಬುರ್ಗಿಯಿಂದ ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನಡೆದುಹೋಗುವ ದೃಶ್ಯ ಕಾಣುತ್ತಿತ್ತು. ಈ ಸಲ ಭಕ್ತರ ಗುಂಪುಗಳು ತುಂಬಾ ವಿರಳವಾಗಿವೆ.

ಒತ್ತಾಯಪೂರ್ವಕ ಬಂದ್‌: ಸರ್ಕಾರವು ಬಂದ್‌ ಘೋಷಿಸಿದ್ದರೂ ರಾಯಚೂರಿನಲ್ಲಿ ಮಾಲ್‌ಗಳು ಮತ್ತು ಚಿತ್ರಮಂದಿರಗಳು ತೆರೆದುಕೊಂಡಿದ್ದವು. ಕೂಡಲೇ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಮಧ್ಯಾಹ್ನ ಒತ್ತಾಯಪೂರ್ವಕ ಬಂದ್ ಮಾಡಿಸಿದರು. ಕೆಲವು ಖಾಸಗಿ ಶಾಲೆಗಳು 1 ರಿಂದ 6 ತರಗತಿ ಮಕ್ಕಳಿಗೆ ಶನಿವಾರ ಮಧ್ಯಾಹ್ನದವರೆಗೂ ಪರೀಕ್ಷೆ ನಡೆಸಿ, ಆನಂತರ ರಜೆ ಘೋಷಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT