ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೆಟ್ರಿಕ್ ನಂತರದ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ

Published 18 ಜನವರಿ 2024, 15:47 IST
Last Updated 18 ಜನವರಿ 2024, 15:47 IST
ಅಕ್ಷರ ಗಾತ್ರ

ರಾಯಚೂರು: 2023-24ನೇ ಸಾಲಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಎಸ್.ಎಸ್.ಪಿ ತಂತ್ರಾಂಶದಡಿ ಮೆಟ್ರಿಕ್ ನಂತರದ ಶಿಷ್ಯವೇತನಕ್ಕಾಗಿ ಅರ್ಹ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ

ಮೆಟ್ರಿಕ್ ನಂತರ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ಮಿತಿ ₹2.50 ಲಕ್ಷ ಮೀರಬಾರದು. ಹೊರ ರಾಜ್ಯದಲ್ಲಿ ಮೆಟ್ರಿಕ್ ನಂತರದ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಜಿಲ್ಲಾ ಕಚೇರಿಯಿಂದ ಇ-ಅಟೇಸ್ಟೇಷನ್ ಮಾಡಿಸಿ, ಸಂಬಂಧಪಟ್ಟ ವಾಸಸ್ಥಳದ ತಾಲ್ಲೂಕುಗಳ ಇಲಾಖೆಯ ಕಚೇರಿಯಲ್ಲಿ ಶಿಷ್ಯವೇತನ ಮಂಜೂರಾತಿಗಾಗಿ ಅವಶ್ಯಕ ದಾಖಲಾತಿಗಳನ್ನು ಸಲ್ಲಿಸಬೇಕು. ಆನ್‍ಲೈನ್ ಮೂಲಕ https://ssp.postmatric.karnataka.gov.in/2324_sa/signin.aspx ವೆಬ್‍ಸೈಟ್ ಮೂಲಕ ಅರ್ಜಿ ಮಾ.31ರೊಳಗಾಗಿ ಸಬಹುದಾಗಿದೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT