ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿ: ಮೌನೇಶ್ವರರ ಜೊಡು ಪಲ್ಲಕ್ಕಿ ಮೆರವಣಿಗೆ

Last Updated 16 ಏಪ್ರಿಲ್ 2022, 12:12 IST
ಅಕ್ಷರ ಗಾತ್ರ

ಮಸ್ಕಿ: ಎರಡನೇ ತಿಂತಣಿ ಕ್ಷೇತ್ರ ಎಂದು ಪ್ರಸಿದ್ಧಿ ಪಡೆದ ಪಟ್ಟಣದ ಮೌನೇಶ್ವರರ ಜೋಡು ಪಲ್ಲಕ್ಕಿ ಮೆರವಣಿಗೆ ಶನಿವಾರ ಪ್ರ‌ಮುಖ ಬೀದಿಗಳಲ್ಲಿ ವೈಭವದಿಂದ ನಡೆಯಿತು.

ಬೆಳಿಗ್ಗೆ ಮುದಗಲ್ ರಸ್ತೆಯಲ್ಲಿ ನ ಮೌನೇಶ್ವರರ ಗವಿಯಲ್ಲಿ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳ ನಡೆದವು.

ನಂತರ ದೇವಸ್ಥಾನದಿಂದ ಜೋಡು ಪಲ್ಲಕ್ಕಿ ಮೆರವಣಿಗೆ ಆರಂಭವಾಯಿತು. ಅಶೋಕ ವೃತ್ತ, ಮುಖ್ಯ ಬಜಾರ ಸಂಜೆ ಬಜಾರ ಮೂಲಕ ಸಾಗಿ ರಾತ್ರಿ ಪುನಃ ಮೌನೇಶ್ವರರ ದೇವಸ್ಥಾನಕ್ಕೆ ಆಗಮಿಸಿತು. ಜಯಘೋಷಗಳ ನಡುವೆ ಗುಹೆ ಪ್ರವೇಶ ಕಾರ್ಯಕ್ರಮ ನಡೆಯಿತು.

ಪುರವಂತರ ಸೇವೆ, ನಂದಿಕೋಲ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಮೆರವಣೆಗೆ ಮೆರಗು ನೀಡಿದವು.

ಮಹಿಳೆಯರು ಕುಂಭ ಹಾಗೂ ಕಳಸದೊಂದಿಗೆ ಪಾಲ್ಗೊಂಡಿದ್ದರು. ಮೌನೇಶ್ವರರ ದೇವಸ್ಥಾನದ ಧರ್ಮಾಧಿಕಾರಿ ಮೌನೇಶ ತಾತ ಸೇರಿದಂತೆ ವಿಶ್ವಕರ್ಮ ಸಮಾಜದ ಮುಖಂಡರು, ಸ್ಥಳೀಯರು ಭಾಗವಹಿಸಿದ್ದರು.


ಮುದ್ದು ಮಲ್ಲಯ್ಯ ನ ರಥೋತ್ಸವ

ಮಸ್ಕಿ: ಪಟ್ಟಣದ ಮುದಗಲ್ ರಸ್ತೆಯಲ್ಲಿನ ಮುದ್ದು ಮಲ್ಲಯ್ಯನ ರಥೋತ್ಸವ ಶನಿವಾರ ಅದ್ದೂರಿಯಾಗಿ ನಡೆಯಿತು.

ಗಚ್ಚಿನಮಠದ ವರ ರುದ್ರಮುನಿ ಸ್ವಾಮೀಜಿ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಹನುಮಂತ ನ ದೇವಸ್ಥಾನದವರೆಗೆ ರಥ ಎಳೆದು ವಾಪಾಸು ತರಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT