ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರಿನ ಓಪೆಕ್ ಕೋವಿಡ್‌ ಆಸ್ಪತ್ರೆಯಲ್ಲಿ ಹಂದಿಗಳು

Last Updated 23 ಆಗಸ್ಟ್ 2020, 7:49 IST
ಅಕ್ಷರ ಗಾತ್ರ

ರಾಯಚೂರು: ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಓಪೆಕ್ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಕಟ್ಟಡದೊಳಗೆ ಹಂದಿಗಳು ಗುಂಪು ಗುಂಪಾಗಿ ನುಗ್ಗಿದರೂ ಇದುವರೆಗೂ ಅವ್ಯವಸ್ಥೆ ಸರಿಪಡಿಸಲು ಕ್ರಮ ವಹಿಸಿಲ್ಲ.

ಕೋವಿಡ್ ರೋಗಿಯೊಬ್ಬರ ಸಂಬಂಧಿಯು ಕೋವಿಡ್ ವಾರ್ಡ್ ಅವ್ಯವಸ್ಥೆಯನ್ನು ವಿಡಿಯೋ ಮಾಡಿದ್ದಾರೆ. 'ಇಂಥ ಅಸ್ತವ್ಯಸ್ತ ಆಸ್ಪತ್ರೆಯಲ್ಲಿ ಕೋವಿಡ್ ನಿಂದ ಬಳಲುತ್ತಿರುವ ತಂದೆಗೆ ಯಾವ ರೀತಿಯ ಚಿಕಿತ್ಸೆ ನೀಡಲು ಸಾಧ್ಯ' ಎಂದು ರೋಗಿಯ ಸಂಬಂಧಿ ಕಳವಳ ವ್ಯಕ್ತಪಡಿಸಿದ್ದಾರೆ.

ಹಂದಿಗಳು ಕ್ಯಾಂಪಸ್‌ಗಳಲ್ಲಿ ಸುತ್ತಾಡುವುದು ಸಾಮಾನ್ಯವಾಗಿತ್ತು. ಇದೀಗ ಕೋವಿಡ್‌ ವಾರ್ಡ್‌ ಸಂಖ್ಯೆ ಜಿ–7 ರ ಕಟ್ಟಡದೊಳಗೆ ಗುಡ್ಡೆ ಹಾಕಿರುವ ವೈದ್ಯಕೀಯ ತ್ಯಾಜ್ಯಗಳ ಮೂಟೆಗಳೊಂದಿಗೆ ಹಂದಿಗಳ ಹಿಂಡು ಇರುವುದು ವೈರಲ್‌ ಆಗಿರುವ ವಿಡಿಯೋ ತುಣುಕಿನಲ್ಲಿದೆ. ಶನಿವಾರ ಸಂಜೆ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.

‘ರಿಮ್ಸ್‌ ಕ್ಯಾಂಪಸ್‌ನಲ್ಲಿ ಹಂದಿಗಳ ಹಾವಳಿ ಇರುವುದು ನಿಜ. ಆವರಣ ಗೋಡೆ ಇದ್ದರೂ ಹಂದಿಗಳ ಮಾಲೀಕರು ಕಣ್ಣುತಪ್ಪಿಸಿ ಬಂದು ಹಂದಿ ಬಿಡುತ್ತಿದ್ದಾರೆ. ಈ ಹಿಂದೆಯೂ ಅನೇಕ ಬಾರಿ ಸೂಚನೆ ನೀಡಲಾಗಿದೆ. ಹಂದಿಗಳ ತೆರವು ಕಾರ್ಯಾಚರಣೆಯನ್ನೂ ಮಾಡಲಾಗಿದೆ. ಆದರೆ, ಪರಿಸ್ಥಿತಿ ಹತೋಟಿಗೆ ಬಂದಿರಲಿಲ್ಲ. ಈಗಷ್ಟೇ ಮತ್ತೆ ನಗರಸಭೆ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಭಾನುವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಿ, ಹಂದಿಗಳನ್ನು ತೆಗೆದುಕೊಂಡು ಹೋಗಿದ್ದಾರೆ’ ಎಂದು ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್‌ ಡಾ.ಬಸವರಾಜ ಪೀರಾಪುರ ‘ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT