ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಲಿ ಮಾಡಿದರೂ ಪರಿಸರ ರಕ್ಷಿಸುವ ಈರಣ್ಣ

Last Updated 1 ಜನವರಿ 2022, 10:20 IST
ಅಕ್ಷರ ಗಾತ್ರ

ರಾಯಚೂರು: ನೇತಾಜಿ ನಗರದ ನಿವಾಸಿ ಈರಣ್ಣ ಕೋಸಗಿ ಅವರು 15 ವರ್ಷಗಳಿಂದ ಸಸಿಗಳನ್ನು ನೆಟ್ಟು ಪೋಷಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ದಿನಗೂಲಿಯಾದರೂ ಸ್ವಂತ ಖರ್ಚಿನಲ್ಲೇ ಸಸಿ ಸಿದ್ಧಪಡಿಸಿ, ನೆಡುವುದು ವಿಶೇಷ.

ಸಕಲ ಜೀವಿಗಳಿಗೆ ಶುದ್ಧಗಾಳಿ ಮುಖ್ಯ ಎಂಬುದನ್ನು ಅರಿತಿರುವ ಅವರಿಗೆ ಪರಿಸರದ ಮೇಲೆ ತುಂಬಾ ಪ್ರೀತಿ. ರಾಯಚೂರಿನ ಸರ್ಕಾರಿ ಖಾಲಿ ಜಾಗಗಳಲ್ಲಿ ಹಾಗೂ ಅವಕಾಶ ಮಾಡಿಕೊಟ್ಟ ಖಾಸಗಿಯವರ ಜಾಗಗಳಲ್ಲೂ ಸಸಿಗಳನ್ನು ಉಚಿತವಾಗಿ ನೆಡುತ್ತಿದ್ದಾರೆ. ಆರಂಭದಲ್ಲಿ ಅರಣ್ಯ ಇಲಾಖೆಯವರು ಉಚಿತವಾಗಿ ಸಸಿಗಳನ್ನು ಕೊಡುತ್ತಿದ್ದರು. ಅವರು ನಿರಂತರವಾಗಿ ಅದೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದರಿಂದ ಅರಣ್ಯ ಇಲಾಖೆಯವರು ಸಸಿಗಳನ್ನು ಕೊಡುವುದಕ್ಕೆ ಹಿಂದೇಟು ಹಾಕಿದರು.

ಮನೆಪಕ್ಕದಲ್ಲಿ ಜಾಗದ ಕೊರತೆ ಇದ್ದುದರಿಂದ ಮನೆಯ ಗೋಡೆಗೆ ಪ್ಲಾಸ್ಟಿಕ್‌ ಡಬ್ಬಿಗಳನ್ನು ನೇತುಹಾಕಿ ನರ್ಸರಿ ಅಭಿವೃದ್ಧಿ ಆರಂಭಿಸಿದರು. ಆನಂತರ ಆಯ್ದ ಶಾಲೆಗಳಲ್ಲಿ ಮಕ್ಕಳ ಮೂಲಕವೇ ಸಸಿ ಅಭಿವೃದ್ಧಿ ಮಾಡಿಸುತ್ತಿದ್ದಾರೆ. ಪ್ರತಿಯೊಂದಕ್ಕೂ ಸ್ವಂತ ಹಣ ವಿನಿಯೋಗಿಸುತ್ತಿದ್ದಾರೆ. ಟೇಲರಿಂಗ್‌ ಕೆಲಸ ಮಾಡುವ ಪತ್ನಿಯೇ ಮನೆ ನಿರ್ವಹಣೆ ಮಾಡುತ್ತಾರೆ. ಈರಣ್ಣ ಮಾತ್ರ ತಮ್ಮ ಕೂಲಿಯಿಂದ ಸಿಗುವ ಹಣವನ್ನೆಲ್ಲ ಪರಿಸರಕ್ಕೆ ವಿನಿಯೋಗಿಸುತ್ತಾರೆ.

ಸಸಿಗಳನ್ನು ನೆಡುವುದಕ್ಕೆ ಉಚಿತವಾಗಿ ಗುಂಡಿ ತೋಡಿ ಕೊಡುವುದು ಮತ್ತು ಅಗತ್ಯವಿದ್ದವರಿಗೆ ಸಸಿಗಳನ್ನು ನೀಡುವುದನ್ನು ಅವರು ರೂಢಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT